ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಾಹುತಿ ದಾಳಿಗೆ ಸಂಚು: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಬಂಧನ

Last Updated 21 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಜಮ್ಮು: ‘ಲಷ್ಕರ್‌ ಎ–ತಯಬಾದ (ಎಲ್‌ಇಟಿ) ಮಾರ್ಗದರ್ಶಕ ಹಾಗೂ ಪಾಕಿಸ್ತಾನದ ಸೇನೆಯ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಿದ್ದ ಉಗ್ರನನ್ನು ಭಾರತೀಯ ಸೇನೆಯು ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭಾನುವಾರ ಬಂಧಿಸಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಸಬ್ಜ್‌ಕೋಟ್‌ ಗ್ರಾಮದ ನಿವಾಸಿ ತಬರಕ್‌ ಹುಸೇನ್‌ (32) ಬಂಧಿತ. ಈತ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ. ಆರು ವರ್ಷಗಳಲ್ಲಿ ಎರಡನೇ ಬಾರಿ ಈತನನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಸೈನಿಕರು ಬಂಧಿಸಲು ಮುಂದಾ
ದಾಗ, ‘ಸಾಯುವುದಕ್ಕಾಗಿ ಬಂದಿದ್ದೆ. ನನಗೆ ಮೋಸ ಮಾಡಿಬಿಟ್ಟರು. ಸಹೋದರರೆ, ಭಾರತೀಯ ಸೈನಿಕರಿಂದ ನನ್ನನ್ನು ಪಾರು ಮಾಡಿ ಎಂದು ಆತ ಕೂಗಿಕೊಳ್ಳುತ್ತಿದ್ದ’ ಎಂದಿದ್ದಾರೆ.

‘ಸೆಹರ್‌ ಮಕ್ರಿ ಪ್ರದೇಶದ ಬಳಿ ಗಸ್ತಿನಲ್ಲಿದ್ದ ಸೈನಿಕರನ್ನು ಕಂಡೊಡನೆಯೇ ಆತ ಓಡಿ ಹೋಗಲು ಯತ್ನಿಸಿದ್ದ. ಆಗ ಆತನತ್ತ ಗುಂಡು ಹಾರಿಸಿ, ಬಳಿಕ ಬಂಧಿಸಲಾಗಿದೆ’ ಎಂದು ರಜೌರಿ ಪೊಲೀಸ್‌ ವರಿಷ್ಠಾಧಿಕಾರಿ ಮೊಹಮ್ಮದ್‌ ಅಸ್ಲಾಂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT