ಶನಿವಾರ, ಅಕ್ಟೋಬರ್ 23, 2021
23 °C

ಮಹಾರಾಷ್ಟ್ರ ದೋಣಿ ದುರಂತ: ಏಳು ಮೃತದೇಹ ಪತ್ತೆ, ಮೃತರ ಸಂಖ್ಯೆ 10ಕ್ಕೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಎರಡು ದಿನಗಳ ಹಿಂದೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವಾರ್ಧಾ ನದಿಯಲ್ಲಿ ದೋಣಿ ಮುಳುಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಏಳು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಮೃತರ ಸಂಖ್ಯೆ 10ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ದೋಣಿ ದುರಂತ ಸಂಭವಿಸಿತ್ತು. ದೋಣಿಯಲ್ಲಿ ಒಟ್ಟು 13 ಜನರಿದ್ದರು. ಘಟನೆ ನಡೆದಾಗ ಇಬ್ಬರು ಈಜಿ ಸುರಕ್ಷಿತವಾಗಿ ದಡಸೇರಿದ್ದರು. ಅಂದು ಮೂವರ ಶವಗಳನ್ನು ಹೊರತೆಗೆಯಲಾಗಿತ್ತು. ರಕ್ಷಣಾ ತಂಡದವರು ಇಂದು ಏಳು ಮಂದಿಯ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. 11 ವರ್ಷದ  ಬಾಲಕಿಯೊಬ್ಬಳು ಇನ್ನೂ ನಾಪತ್ತೆಯಾಗಿದ್ದಾಳೆ.

ಮೃತಪಟ್ಟವರು ಗಡೆಗಾಂವ್‌ ನಿವಾಸಿಗಳು. ವಾರ್ಧಾ ತಾಲ್ಲೂಕಿನ ಜಲಪಾತವನ್ನು ವೀಕ್ಷಿಸಿ ದೋಣಿಯಲ್ಲಿ ವಾಪಸಾಗುತ್ತಿದ್ದಾಗ, ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು