ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ₹169.76 ಕೋಟಿ ಪರಿಹಾರ ಮೊತ್ತದ ಪ್ರಕರಣಗಳು ಇತ್ಯರ್ಥ

Last Updated 14 ಆಗಸ್ಟ್ 2022, 11:06 IST
ಅಕ್ಷರ ಗಾತ್ರ

ಠಾಣೆ, ಮಹಾರಾಷ್ಟ್ರ (ಪಿಟಿಐ): ‘ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ₹169.76 ಕೋಟಿ ಮೊತ್ತದಷ್ಟು ಪರಿಹಾರ ಒಳಗೊಂಡ ಪ್ರಕರಣಗಳನ್ನು ಇತ್ಯರ್ಥವನ್ನು ಮಾಡಲಾಗಿದೆ’ ಎಂದುಜಿಲ್ಲಾ ಕಾನೂನು ನೆರವು ಸೇವಾ ಪ್ರಾಧಿಕಾರದ (ಡಿಎಲ್‌ಎಎಸ್‌ಎ) ಕಾರ್ಯದರ್ಶಿ ಈಶ್ವರ್ ಕೆ ಸೂರ್ಯವಂಶಿ ತಿಳಿಸಿದ್ದಾರೆ. ‌

‘ಶನಿವಾರ ಠಾಣೆ ಮತ್ತು ಪಾಲ್ಘರ್‌ನ ನ್ಯಾಯಾಲಯಗಳಲ್ಲಿ 98 ಪೀಠಗಳ ಮೂಲಕ 12,930 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ವಿಚಾರಣೆಯ ನಂತರದ, ₹2.71 ಕೋಟಿ ಪರಿಹಾರ ಒಳಗೊಂಡ 1,107 ಪ್ರಕರಣಗಳನ್ನು ಹಾಗೂ ವಿಚಾರಣೆ ಪೂರ್ವದ, ₹167.04 ಕೋಟಿ ಪರಿಹಾರ ಒಳಗೊಂಡ 11,823 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಇತ್ಯರ್ಥಪಡಿಸಲಾದ ಪ್ರಕರಣಗಳಲ್ಲಿ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ (ಎನ್‌ಐ) ಆ‍್ಯಕ್ಟ್‌ಗೆ ಸಂಬಂಧಿಸಿದ, ₹88.39 ಕೋಟಿ ಪರಿಹಾರ ಮೊತ್ತದ ವ್ಯಾಜ್ಯಗಳಿದ್ದವು. ಇವು ಗರಿಷ್ಠ ಪ್ರಮಾಣದ ಇತ್ಯರ್ಥಗಳಾಗಿವೆ. ನಂತರ ₹36.48 ಕೋಟಿ ಪರಿಹಾರ ಮೊತ್ತದ ಇತರ ಸಿವಿಲ್ ಪ್ರಕರಣಗಳನ್ನು ಹಾಗೂ ಮೋಟಾರ್‌ ಆ‍್ಯಕ್ಸಿಡೆಂಟ್‌ ಕ್ಲೈಮ್ಸ್‌ ಟ್ರಿಬುನಲ್‌ನ (ಎಮ್‌ಎಸಿಟಿ) ₹25.98 ಕೋಟಿ ಮೊತ್ತದ ಪರಿಹಾರ ಒಳಗೊಂಡ ಪ್ರಕರಣಗಳನ್ನು ಬಗೆಹರಿಸಲಾಗಿದೆ. ಎಮ್‌ಎಸಿಟಿ ಅಡಿಯಲ್ಲಿ, ಅಪಘಾತದಲ್ಲಿ ಸಾವನ್ನಪ್ಪಿದ ಶಾಲೆಯ ಶಿಕ್ಷಕರೊಬ್ಬರ ಕುಟುಂಬಕ್ಕೆ ₹52 ಲಕ್ಷ ಪರಿಹಾರ ನೀಡಲಾಗಿದೆ’ ಎಂದು ವಕೀಲ ಆನಂದ್‌ ಹನ್ವಂತೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT