ಮಂಗಳವಾರ, ಡಿಸೆಂಬರ್ 7, 2021
27 °C

ಮಾನಹಾನಿಗೆ ಹೆದರಿ ಮಹಂತ ಗಿರಿ ಆತ್ಮಹತ್ಯೆ: ಸಿಬಿಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಖಿಲ ಭಾರತೀಯ ಅಖಾಡ ಪರಿಷತ್‌ ಅಧ್ಯಕ್ಷರಾಗಿದ್ದ ಮಹಂತ ನರೇಂದ್ರ ಗಿರಿ ಅವರು ತಮ್ಮ ಶಿಷ್ಯರಿಂದಲೇ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಸಮಾಜದಲ್ಲಿ ಎದುರಾಗಬಹುದಾದ ಮಾನನಷ್ಟ ಮತ್ತು ಅವಮಾನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಸಿಬಿಐ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ. 

ಮಹಂತ್‌ ಅವರು ಸಾವಿಗೂ ಮುನ್ನ ವಿಡಿಯೊವೊಂದನ್ನು ರೆಕಾರ್ಡ್‌ ಮಾಡಿದ್ದು, ಅದರಲ್ಲಿ ‘ನಾನು ಮಹಿಳೆಯೊಂದಿಗೆ ಆಕ್ಷೇಪಾರ್ಹ ಭಂಗಿಯಲ್ಲಿದ್ದ ತಿರುಚಿದ ವಿಡಿಯೊವೊಂದನ್ನು ಆನಂದ ಗಿರಿ ಅವರು ಬಿಡುಗಡೆ ಮಾಡಲು ಹೊರಟ್ಟಿದ್ದರು’ ಎಂದು ಮಹಂತ ಅವರು ದೂರಿದ್ದಾರೆ.

ನವೆಂಬರ್‌ 20ರಂದು ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ,  ಅಲಹಾಬಾದ್‌ನ ಹನುಮಾನ್ ದೇವಸ್ಥಾನದ ಅರ್ಚಕ ಆನಂದ ಗಿರಿ, ಆದ್ಯ ಪ್ರಸಾದ್ ತಿವಾರಿ ಮತ್ತು ಅವರ ಮಗ ಸಂದೀಪ್ ತಿವಾರಿ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಆರೋಪವನ್ನು ಹೊರಿಸಲಾಗಿದೆ.

ಓದಿ: ಮಹಂತ ನರೇಂದ್ರ ಗಿರಿ ಆತ್ಮಹತ್ಯೆ: ಅವರ ಮೂವರು ಶಿಷ್ಯಂದಿರ ಬಂಧನ

ಭಾರತದ ಅತಿದೊಡ್ಡ ಸಾಧುಗಳ ಸಂಘಟನೆಯ ಅಧ್ಯಕ್ಷರಾಗಿದ್ದ ನರೇಂದ್ರ ಗಿರಿ ಅವರ ಮೃತದೇಹವು ಇದೇ ಸೆಪ್ಟೆಂಬರ್ 20 ರಂದು ಅಲಹಾಬಾದ್‌ನ ಬಘಾಂಬರಿ ಮಠದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಓದಿ: ಮಹಂತ ಗಿರಿ ಸಾವು: ಎಫ್‌ಐಆರ್‌ ದಾಖಲಿಸಿದ ಸಿಬಿಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು