ಬುಧವಾರ, ಮಾರ್ಚ್ 22, 2023
21 °C

ಸ್ಟ್ಯಾನ್ ಸ್ವಾಮಿ ನಿಧನ: ಜೈಲಿನಲ್ಲಿ ಉಪವಾಸ ಸತ್ಯಾಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಎಲ್ಗಾರ್ ಪರಿಷತ್ ಸಭೆ, ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ ಸ್ಟ್ಯಾನ್ ಸ್ವಾಮಿ ಅವರ ನಿಧನವನ್ನು ಸಾಂಸ್ಥಿಕ ಹತ್ಯೆಯೆಂದು ಆರೋಪಿಸಿ, ಪ್ರಕರಣದ ಹತ್ತು ಆರೋಪಿಗಳು ತಾನೋಜಿ ಜೈಲಿನಲ್ಲಿ ಬುಧವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

ಪ್ರತಿಭಟನೆಯ ಸಂಕೇತವಾಗಿ, ಈ ಪ್ರಕರಣದ ಸಹ-ಆರೋಪಿಗಳಾದ ರೋನಾ ವಿಲ್ಸನ್, ಸುರೇಂದ್ರ ಗ್ಯಾಡ್ಲಿಂಗ್, ಸುಧೀರ್ ಧವಾಲೆ, ಮಹೇಶ್ ರೌತ್, ಅರುಣ್ ಫೆರೀರಾ, ವೆರ್ನಾನ್ ಗೊನ್ಸಾಲ್ವೆಸ್, ಗೌತಮ್ ನವಲಖಾ, ಆನಂದ್ ತೇಲ್ತುಂಬ್ಡೆ, ರಮೇಶ್ ಗೈಚೋರ್ ಮತ್ತು ಸಾಗರ್ ಗೋರ್ಖೆ ಅವರು ಜೈಲಿನಲ್ಲಿ ಉಪವಾಸ ಕೈಗೊಂಡರು.

ಎಲ್ಗಾರ್ ಪರಿಷತ್ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ತಾಲೋಜ ಜೈಲಿನ ಮಾಜಿ ಅಧೀಕ್ಷಕರ ವಿರುದ್ಧವೂ ಕ್ರಮಕೈಗೊಳ್ಳಬೇಕು. ಸ್ವಾಮಿ ಅವರ ಸಾವಿನ ನ್ಯಾಯಾಂಗ ತನಿಖೆಯನ್ನು ನಡೆಸಬೇಕು ಎಂದೂ ಪ್ರತಿಭಟನನಿರತರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಒತ್ತಾಯಿಸಿದರು.

ಇಂಡೋ–ಅಮೆರಿಕನ್ ಗುಂಪುಗಳಿಂದ ಸಂತಾಪ

ವಾಷಿಂಗ್ಟನ್: ಸ್ಟ್ಯಾನ್ ಸ್ವಾಮಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಇಂಡೋ–ಅಮೆರಿಕನ್ ಗುಂಪುಗಳು, ಸ್ವಾಮಿ ಅವರು ಭಾರತದಲ್ಲಿ ಬಡ ಬುಡಕಟ್ಟು ಜನಾಂಗದವರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಮಾಜ ಸೇವಕ ಎಂದು ಬಣ್ಣಿಸಿವೆ.

ಫೆಡರೇಶನ್ ಆಫ್ ಇಂಡಿಯನ್ ಅಮೆರಿಕನ್ ಕ್ರಿಶ್ಚಿಯನ್ ಆರ್ಗನೈಸೇಷನ್ಸ್ ಆಫ್ ಎನ್ಎ (ಫಿಯಾಕೋನಾ), ‘ಸರಳ ಮತ್ತು ನಿರ್ಭಯ ವ್ಯಕ್ತಿಯಾಗಿದ್ದ ಸ್ವಾಮಿ ಅವರು ಬುಡಕಟ್ಟು ಜನಾಂಗಮತ್ತು ಅವರ ಸಂಪನ್ಮೂಲನದ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳುವ ವ್ಯವಸ್ಥೆಗೆ ವಿರುದ್ಧವಾಗಿ ನಿಂತು ಹೋರಾಡಿದ್ದರು’ ಎಂದು ಹೇಳಿದೆ.

‘ಸ್ವಾಮಿ ಅವರ ನಿಧನವು ಭಾರತದ ಪ್ರಜಾಪ್ರಭುತ್ವಕ್ಕೆ ಕರಾಳ ದಿನವಾಗಿದೆ’ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ಸಿನ ಉಪಾಧ್ಯಕ್ಷ ಜಾರ್ಜ್ ಅಬ್ರಹಾಂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು