ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನಾ ಶಿವ ಸೈನಿಕರದ್ದು, ಖಾಸಗಿ ಕಂಪನಿಯಲ್ಲ: ಉದ್ಧವ್ ವಿರುದ್ಧ ಶಿಂದೆ ವಾಗ್ದಾಳಿ

Last Updated 6 ಅಕ್ಟೋಬರ್ 2022, 11:24 IST
ಅಕ್ಷರ ಗಾತ್ರ

ಮುಂಬೈ: ಶಿವಸೇನಾಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ವಾಗ್ದಾಳಿ ಮುಂದುವರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿವಸೇನಾಎಂಬುದು ನಿಮ್ಮ (ಉದ್ಧವ್ ಠಾಕ್ರೆ) ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಲ್ಲ. ಶಿವಸೇನಾ ಶಿವ ಸೈನಿಕರದ್ದು, ಅದಕ್ಕಾಗಿ ತಮ್ಮ ಬೆವರು ಹರಿಸಿದ್ದಾರೆ. ಅಧಿಕಾರದ ಆಸೆಗಾಗಿ ಪಾಲುದಾರಿಕೆ ಮಾಡಿಕೊಳ್ಳುವಂತಹ ನಿಮ್ಮಂತವರದ್ದಲ್ಲ’ ಎಂದು ಕಿಡಿಕಾರಿದ್ದಾರೆ.

ನನ್ನನ್ನು ‘ಕಟ್ಟಪ್ಪ’ ಎಂದು ಕರೆಯುತ್ತಾರೆ. ‘ಕಟ್ಟಪ್ಪ’ ಕೂಡ ಸ್ವಾಭಿಮಾನ ಹೊಂದಿದ್ದ ವ್ಯಕ್ತಿ. ನಿಮ್ಮಂತೆ ಡಬಲ್ ಸ್ಟಾಂಡರ್ಡ್ ವ್ಯಕ್ತಿ ಅಲ್ಲ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ ಎಂದುಉದ್ಧವ್ ಹೇಳಿಕೆಗೆ ಸಿಎಂ ಏಕನಾಥ್ ಶಿಂದೆ ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಶಿವಸೇನಾದಶಿಂದೆ ಬಣದ ನಾಯಕ ರಾಮದಾಸ್ ಕದಂ, ‘ಉದ್ಧವ್ ಜೀ, ನಿಮ್ಮ ಸಹೋದರ, ಸೋದರ ಸಂಬಂಧಿಗಳು ಅಥವಾ ರಾಜ್ ಠಾಕ್ರೆ ಕೂಡ ನಿಮ್ಮೊಂದಿಗೆ ಇಲ್ಲ. ನಿಮ್ಮ ಕುಟುಂಬಸ್ಥರನೇ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ನೀವು ರಾಜ್ಯವನ್ನು ಹೇಗೆ ಉಳಿಸಿಕೊಳ್ಳುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT