ಶನಿವಾರ, ಡಿಸೆಂಬರ್ 3, 2022
20 °C

ಕೇರಳ: ರಬ್ಬರ್‌ ಶೀಟ್‌ ಕಳವು; 37 ವರ್ಷದ ಬಳಿಕ ಆರೋಪಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಪತ್ತನಂತಿಟ್ಟ: ರಬ್ಬರ್‌ ಶೀಟ್‌ ಕಳವು ಪ್ರಕರಣಕ್ಕೆ ಸಂಬಂಧಿಸಿ ಬರೋಬ್ಬರಿ 37 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಿದ ಘಟನೆ ಕೇರಳದಲ್ಲಿ ವರದಿಯಾಗಿದೆ. 

ರಬ್ಬರ್‌ ಶೀಟ್‌ ಕಳವು ಮಾಡಿದ ಬಳಿಕ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ದಕ್ಷಿಣ ಕೇರಳದ ವೆಚ್ಚೂಚಿರಾ ಗ್ರಾಮದ ನಿವಾಸಿ ಪೊಡಿಯನ್‌ ಎಂಬುವವರನ್ನು ಈಗ ಪೊಲೀಸರು ಬಂಧಿಸಿದ್ದಾರೆ. 

1985ರಲ್ಲಿ ರಬ್ಬರ್‌ ಶೀಟ್‌ ಕಳವು ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿ ಪೊಡಿಯನ್‌ ಎಲ್ಲಿಯೂ ಕಾಣಸಿಕ್ಕಿರಲಿಲ್ಲ. ಮೊಬೈಲ್‌ ಹೊಂದಿರದಿದ್ದ ಪೊಡಿಯನ್‌ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಸಂಬಂಧಿಕರಿಗಾಗಲಿ ಮತ್ತು ಗ್ರಾಮಸ್ಥರಿಗಾಗಲಿ ಆರೋಪಿ ಪೊಡಿಯನ್‌ ಎಲ್ಲಿದ್ದಾರೆಂಬ ಸುಳಿವು ಯಾರಿಗೂ ಇರಲಿಲ್ಲ.

ಕಳ್ಳತನದ ಬಳಿಕ ಸಮೀಪದ ಪದುಪರ ಅರಣ್ಯದಲ್ಲಿ ಅಡಗಿದ್ದ ಆರೋಪಿಯನ್ನು ಸುಳಿವು ಆಧರಿಸಿ ವೆಚ್ಚೂಚಿರಾ ಪೊಲೀಸರು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು