ಭಾನುವಾರ, ನವೆಂಬರ್ 28, 2021
19 °C

ದೆಹಲಿ: ಇಟ್ಟಿಗೆ ಎಸೆದು ವ್ಯಕ್ತಿಯ ಪ್ರಾಣ ತೆಗೆದ ಕೋತಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕಟ್ಟಡದ ಮೇಲಿಂದ ಕೋತಿಯೊಂದು ಎಸೆದ ಕಲ್ಲು ವ್ಯಕ್ತಿಯೊಬ್ಬರ ಪ್ರಾಣ ತೆಗೆದಿದೆ.

30 ವರ್ಷದ ಮೊಹಮ್ಮದ್ ಕುರ್ಬಾನ್ ಎಂಬುವವರ ತಲೆಯ ಮೇಲೆ ಕೋತಿ ಎಸೆದ ಇಟ್ಟಿಗೆ ಬಿದ್ದಿದ್ದು,  ಆತ ಮೃತಪಟ್ಟಿರುವ ಘಟನೆ ದೆಹಲಿಯ ನಬಿ ಕರೀಮ್ ಪ್ರದೇಶದಲ್ಲಿ ನಡೆದಿದೆ.

ಕಟ್ಟಡದ ಮೇಲೆ ಕುಳಿತಿದ್ದ ಕೋತಿಯೊಂದು ಎರಡನೇ ಮಹಡಿಯಿಂದ ಇಟ್ಟಿಗೆಯನ್ನು ಎಸೆದಿದೆ. ಅದು ಕೆಳಗೆ ನಿಂತಿದ್ದ ಕುರ್ಬಾನ್‌ ಅವರ ತಲೆ ಮೇಲೆ ಬಿದ್ದಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಯಿತು. ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

‘ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್‌ನ ಮುಚ್ಚಳವನ್ನು ಕೋತಿಗಳು ತೆರೆಯಬಾರದು ಎಂದು ಮಾಲೀಕರು ಅದರ ಮೇಲೆ ಎರಡು ಇಟ್ಟಿಗೆಗಳನ್ನು ಇಟ್ಟಿದ್ದರು. ಕೋತಿಯೊಂದು ಆ ಇಟ್ಟಿಗೆಗಳನ್ನು ಪಕ್ಕಕ್ಕೆ ಸರಿಸಲು ಪ್ರಯತ್ನಿಸಿದೆ. ಆದರೆ, ದುರಾದೃಷ್ಟವಶಾತ್ ಕೋತಿಯ ಕೈಯಿಂದ ಇಟ್ಟಿಗೆಯೊಂದು ಜಾರಿ ಕೆಳಗೆ ಬಿದ್ದಿದೆ. ಆ ಇಟ್ಟಿಗೆ ಕಟ್ಟಡದ ಕೆಳ ಭಾಗದಲ್ಲಿ ನಿಂತಿದ್ದ ಕುರ್ಬಾನ್ ಅವರ ತಲೆ ಮೇಲೆ ಬಿದ್ದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕಟ್ಟಡದ ಮಾಲೀಕರು ಸೇರಿದಂತೆ ಸ್ಥಳೀಯರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು