ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಮದಾಬಾದ್‌ನ ಮೆಕ್‌ಡೊನಾಲ್ಡ್ಸ್ ವಿತರಿಸಿದ ಪಾನೀಯದಲ್ಲಿ ಹಲ್ಲಿ: ಔಟ್‌ಲೆಟ್‌ಗೆ ಬೀಗ

ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ 'ಮೆಕ್‌ಡೊನಾಲ್ಡ್ಸ್‌'ವಿತರಿಸಿದ ತಂಪು ಪಾನೀಯದಲ್ಲಿ ಹಲ್ಲಿ ಕಂಡುಬಂದಿದೆ ಎನ್ನಲಾಗಿದೆ. ಈ ಸಂಬಂಧ ಕ್ರಮ ಕೈಗೊಂಡಿರುವ ಆಹಾರ ಮತ್ತು ಔಷಧ ಇಲಾಖೆ ಔಟ್‌ಲೆಟ್‌ಗೆ ಬೀಗ ಜಡಿದಿದೆ ಎಂದು ವರದಿಯಾಗಿದೆ.

ಫಾಸ್ಟ್‌ ಫುಡ್‌ ವಿತರಿಸುವ ಅಮೆರಿಕ ಮೂಲದ 'ಮೆಕ್‌ಡೊನಾಲ್ಡ್ಸ್‌' ದೇಶದಾದ್ಯಂತ ಹಲವು ಔಟ್‌ಲೆಟ್‌ಗಳನ್ನು ಹೊಂದಿದೆ.

ಹಲ್ಲಿ ಸಿಕ್ಕ ಬಗ್ಗೆ ಗ್ರಾಹಕ ಭಾರ್ಗವ್ ಜೋಶಿ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಇಲಾಖೆಯು ಕ್ರಮ ಜರುಗಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಈ ಬಗ್ಗೆ ಮಾತನಾಡಿರುವ ಜೋಶಿ, 'ಮೆಕ್‌ಡೊನಾಲ್ಡ್‌ನ ಔಟ್‌ಲೆಟ್‌ನಲ್ಲಿ ನಾನು ಕೊಂಡ ತಂಪು ಪಾನೀಯದಲ್ಲಿ ಹಲ್ಲಿ ಪತ್ತೆಯಾಗಿತ್ತು.ಈ ಬಗ್ಗೆ ಮ್ಯಾನೇಜರ್‌ಗೆತಿಳಿಸಿದರೆನಕ್ಕರು.ಸಿಸಿಟಿವಿಕ್ಯಾಮೆರಾಗಳನ್ನು ಪರಿಶೀಲಿಸುವುದಾಗಿ ಹೇಳಿದರು. ಆದರೆ, ಮತ್ತೆ ನಮ್ಮ ಬಳಿಗೆ ಬರಲೇ ಇಲ್ಲ.ಈ ಮಧ್ಯೆ ಗ್ರಾಹಕರಿಂದ ಆರ್ಡರ್‌ ಪಡೆಯುವುದು ಮುಂದುವರಿದೇ ಇತ್ತು.ಕ್ರಮ ಕೈಗೊಳ್ಳುವಂತೆ ನಾವು ಔಟ್‌ಲೆಟ್‌ನವರನ್ನು ಒತ್ತಾಯಿಸಿದರೆ, ನಿಮ್ಮ ಬಿಲ್‌ ಹಣ ಹಿಂದಿರುಗಿಸುವುದಾಗಿ ಹೇಳಿದರು" ಎಂದು ಜೋಶಿ ಹೇಳಿದ್ದಾರೆ.

'ನಾವುಔಟ್‌ಲೆಟ್‌ನಿಂದ ಹೊರ ಹೋಗದೇ ಇದ್ದರೆಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಸಿದರು. ನಂತರ ನಾವು ಆಹಾರ ಮತ್ತು ಔಷಧ ಇಲಾಖೆಗೆ ದೂರು ನೀಡಿದೆವು.ಅವರು ಔಟ್‌ಲೆಟ್‌ಅನ್ನು ಪರೀಕ್ಷಿಸಿ ಬೀಗ ಹಾಕಿದ್ದಾರೆ' ಎಂದು ಭಾರ್ಗವ್ ಜೋಶಿ ತಿಳಿಸಿದ್ದಾರೆ.

ಈ ಬಗ್ಗೆ ಆಹಾರ ತಯಾರಕ ಸಂಸ್ಥೆ ಮೆಕ್‌ಡೊನಾಲ್ಡ್ಸ್‌ನಿಂದ ಯಾವುದೇಸ್ಪಷ್ಟನೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT