ಲಕ್ನೋ: ಜಾರ್ಖಂಡ್ ವಿಧಾನಸಭೆ ಕಟ್ಟಡದಲ್ಲಿ ಮುಸ್ಲಿಂ ಶಾಸಕರಿಗೆ ನಮಾಜ್ ಮಾಡಲು ಸ್ಥಳಾವಕಾಶ ನೀಡಿರುವ ಬೆನ್ನಲ್ಲೇ, ಉತ್ತರ ಪ್ರದೇಶ ವಿಧಾನಸಭೆ 'ವಿಧಾನ ಭವನ'ದಲ್ಲಿಯೂ ನಮಾಜ್ ಮಾಡಲು ಅವಕಾಶ ಕಲ್ಪಿಸಬೇಕು ಎಂಬ ಕೂಗು ಕೇಳಿ ಬಂದಿದೆ.

ಈ ನಿಟ್ಟಿನಲ್ಲಿ ಸಮಾಜವಾದಿ ಪಕ್ಷದ ಕಾನ್ಪುರ್ ಸೀಸಮಾವು ಕ್ಷೇತ್ರದ ಶಾಸಕ ಇರ್ಫಾನ್ ಸೋಲಂಕಿ ಅವರು ಉತ್ತರ ಪ್ರದೇಶ ವಿಧಾನಸಭೆ ಸ್ಪೀಕರ್ ಅವರಿಗೆ ಮನವಿ ಮಾಡಿದ್ದು, ‘ವಿಧಾನಭವನದಲ್ಲಿ ನಮಾಜ್ ಮಾಡಲು ಸ್ಥಳಾವಕಾಶ ಒದಗಿಸಿ ಕೊಡಬೇಕು’ಎಂದಿದ್ದಾರೆ.

ನಾನು 15 ವರ್ಷದಿಂದ ಶಾಸಕನಾಗಿದ್ದೇನೆ. ವಿಧಾನಸಭೆ ಕಲಾಪಗಳು ನಡೆಯುವ ಸಂದರ್ಭದಲ್ಲಿ ನಾವು ಮುಸ್ಲಿಂ ಶಾಸಕರು ನಮಾಜ್ ಮಾಡಲು ಕಲಾಪ ಮೊಟಕುಗೊಳಿಸಿ ಹೊರಗೆ ಹೋಗಬೇಕಾಗುತ್ತದೆ. ಇದನ್ನು ತಪ್ಪಿಸಲು ನಮಗೆ ವಿಧಾನಭವನದಲ್ಲೇ ಸ್ಥಳಾವಕಾಶ ಒದಗಿಸಿದರೆ ಅನುಕೂಲ ಆಗುತ್ತದೆ’ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದ್ದಾರೆ.

‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸ್ಪೀಕರ್ ನಮ್ಮ ಮನವಿ ಪರಿಗಣಿಸಿದರೇ ಯಾರಿಗೂ ಹಾನಿಯೇನು ಇಲ್ಲ’ ಎಂದು ಅವರು ಹೇಳಿದ್ದಾರೆ. ಇರ್ಫಾನ್ ಸೋಲಂಕಿ ಅವರು ಈ ಬಗ್ಗೆ ಲಿಖಿತವಾಗಿ ಮನವಿ ಸಲ್ಲಿಸಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ಜಾರ್ಖಂಡ್ ವಿಧಾನಸಭೆ ಸ್ಪೀಕರ್ ವಿಧಾನಸಭೆ ಕಟ್ಟಡದದಲ್ಲಿ ಮುಸ್ಲಿಂ ಶಾಸಕರಿಗೆ ನಮಾಜ್ ಮಾಡಲು ಅನುಕೂಲ ಆಗುವಂತೆ ಸ್ಥಳಾವಕಾಶಮಾಡಿಕೊಟ್ಟುಸೆ.2 ರಂದು ಆದೇಶ ಮಾಡಿದ್ದರು. ಇದನ್ನು ಆಡಳಿತಾರೂಢ ಜೆಎಂಎಂ ಹಾಗೂ ಕಾಂಗ್ರೆಸ್ ಸ್ವಾಗತಿಸಿದರೆ, ಬಿಜೆಪಿ ವಿರೋಧಿಸಿತ್ತು. ಹಿಂದೂ ಶಾಸಕರಿಗೆ ಪ್ರಾರ್ಥನೆ ಮಾಡಲು ವಿಧಾನಸಭೆ ಕಟ್ಟಡದಲ್ಲಿ ದೇವಸ್ಥಾನ ಕಟ್ಟಿಸಿ ಕೊಡಿ ಎಂದು ಬಿಜೆಪಿ ಶಾಸಕರು ವಿವಾದ ಎಬ್ಬಿಸಿದ್ದಾರೆ.

ಇದನ್ನೂ ಓದಿ:ಬಿಎಸ್ಪಿಯನ್ನು ಅಧಿಕಾರಕ್ಕೆ ತರಲು ಬ್ರಾಹ್ಮಣ, ದಲಿತರು ಒಗ್ಗಟ್ಟಾಗಬೇಕು: ಮಾಯಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.