ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕಿಪಾಕ್ಸ್‌ ಭೀತಿ: ದೆಹಲಿಯಲ್ಲಿ ಆಸ್ಪತ್ರೆಗೆ ತೆರಳುವ ರೋಗಿಗಳ ಸಂಖ್ಯೆ ಹೆಚ್ಚಳ

Last Updated 29 ಜುಲೈ 2022, 11:27 IST
ಅಕ್ಷರ ಗಾತ್ರ

ನವದೆಹಲಿ:ದೆಹಲಿ ಮತ್ತು ರಾಷ್ಟ್ರರಾಜಧಾನಿ ಸುತ್ತಲಿನ ಪ್ರದೇಶದ ಜನರಲ್ಲಿ ಮಂಕಿಪಾಕ್ಸ್‌ ವೈರಸ್ ಭೀತಿ ಹೆಚ್ಚಾಗಿದೆ. ಸಣ್ಣ ಅಲರ್ಜಿ ಕಾಣಿಸಿಕೊಂಡರೂ ಆಸ್ಪತ್ರೆಗೆ ಧಾವಿಸುವ ರೋಗಿಗಳ ಸಂಖ್ಯೆ ಅಧಿಕವಾಗಿದೆ.

‘ಮಂಕಿಪಾಕ್ಸ್‌ ಬಗ್ಗೆ ಅರಿವು ಹೆಚ್ಚಾಗುತ್ತಿರುವ ಕಾರಣ ಜನರು ಆಸ್ಪತ್ರೆಗೆ ಧಾವಿಸಿ ತಮಗಿರುವ ಲಕ್ಷಣ ಮಂಕಿಪಾಕ್ಸ್‌ ವೈರಸ್‌ಗೆ ಸಂಬಂಧಿಸಿದ್ದೇ ಎಂದು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಕಳೆದ ಏಳು–ಹತ್ತು ದಿನಗಳಿಂದ, ಅದರಲ್ಲೂ ದೇಶದ ಮೊಟ್ಟ ಮೊದಲ ಮಂಕಿಪಾಕ್ಸ್‌ ವೈರಸ್‌ ಪತ್ತೆಯಾದ ನಂತರ ಜನರಲ್ಲಿ ಮಂಕಿಪಾಕ್ಸ್ ಬಗ್ಗೆ ಭಯ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಅದರಲ್ಲೂವಿದೇಶಕ್ಕೆ ಪ್ರಯಾಣಿಸಿ ಬಂದವರಲ್ಲಿ ಭಯ ಹೆಚ್ಚಿದೆ’ ಎಂದು ಮೇದಾಂತ ಆಸ್ಪತ್ರೆಸಮಾಲೋಚಕ ಡಾ.ರಾಮ್‌ಜಿತ್‌ ಸಿಂಗ್‌ ತಿಳಿಸಿದ್ದಾರೆ.

‘ಮಳೆಗಾಲದಲ್ಲಿ ಸಾಮಾನ್ಯವಾಗಿ ಜ್ವರ, ಸಿಡುಬು, ಅಲರ್ಜಿ ಮತ್ತಿತರ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದರೆ ಈ ಲಕ್ಷಣಗಳು ಮಂಕಿಪಾಕ್ಸ್‌ ಸೋಂಕಿನ ಲಕ್ಷಣಗಳಿರಬಹುದೆಂದು ಜನರು ಗೊಂದಲಕ್ಕೊಳಗಾಗಿ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಭಾನುವಾರ ಮಂಕಿಪಾಕ್ಸ್ ವೈರಸ್‌ನ ಮೊದಲ ಪ್ರಕರಣ ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT