ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ | ಮಂಗಗಳ ಹೆಸರಿನಲ್ಲೂ ಜಮೀನು!

Last Updated 16 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಔರಂಗಾಬಾದ್‌: ಮಹಾರಾಷ್ಟ್ರದ ಉಸ್ಮಾನಾಬಾದ್‌ ಜಿಲ್ಲೆಯ ಉಪ್ಲಾ ಗ್ರಾಮದಲ್ಲಿ 32 ಎಕರೆ ಜಮೀನು ಮಂಗಗಳ ಹೆಸರಿನಲ್ಲಿ ನೋಂದಣಿಗೊಂಡಿದ್ದು, ಈ ಮೂಲಕ ಅವುಗಳು ವಿಶೇಷ ಗೌರವಕ್ಕೆ ಪಾತ್ರವಾಗಿವೆ.

‘ಭೂ ದಾಖಲೆಗಳ ಪ್ರಕಾರ ಜಮೀನು ಮಂಗಗಳ ಹೆಸರಿನಲ್ಲಿರುವುದು ಸ್ಪಷ್ಟವಾಗಿದೆ. ಆದರೆ ಪ್ರಾಣಿಗಳ ಹೆಸರಿನಲ್ಲಿ ಯಾರು, ಯಾವಾಗ ಈ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬುದು ತಿಳಿದಿಲ್ಲ’ ಎಂದು ಗ್ರಾಮದ ಮುಖಂಡ ಬಪ್ಪಾ ಪಡ್ವಾಲ್‌ ಹೇಳಿದ್ದಾರೆ.

‘ಈ ಹಿಂದೆ ಮಂಗಗಳು ಗ್ರಾಮದಲ್ಲಿ ನಡೆಯುವ ಎಲ್ಲಾ ಆಚರಣೆಗಳ ಅವಿಭಾಜ್ಯ ಅಂಗವಾಗಿದ್ದವು’ ಎಂದೂ ಅವರು ನೆನಪಿಸಿಕೊಳ್ಳುತ್ತಾರೆ.

‘ಗ್ರಾಮದಲ್ಲಿ ಮದುವೆ ಸಮಾರಂಭಗಳು ನಡೆದಾಗ ಮೊದಲಿಗೆ ಮಂಗಗಳಿಗೆ ಉಡುಗೊರೆ ನೀಡಿದ ಬಳಿಕ ಸಮಾರಂಭ ನಡೆಯುತ್ತಿತ್ತು. ಈ ಪದ್ಧತಿಯನ್ನು ಈಗ ಎಲ್ಲರೂ ಅನುಸರಿಸುತ್ತಿಲ್ಲ’ ಎಂದೂ ತಿಳಿಸಿದ್ದಾರೆ.

‘ಮಂಗಗಳ ಹೆಸರಿನಲ್ಲಿರುವ ಜಮೀನಿನಲ್ಲಿ ಅರಣ್ಯ ಇಲಾಖೆಯವರು ತೋಟಗಾರಿಕೆ ನಡೆಸಿದ್ದಾರೆ. ಈ ಜಾಗದಲ್ಲಿದ್ದ ಮನೆಯೊಂದು ಈಗ ಕುಸಿದು ಬಿದ್ದಿದೆ’ ಎಂದಿದ್ದಾರೆ.

ಮಂಗಗಳ ಮೇಲೆ ವಿಶೇಷ ಪ್ರೀತಿ ಹೊಂದಿರುವ ಈ ಗ್ರಾಮದ ಜನರು ತಮ್ಮ ಮನೆ ಬಾಗಿಲಿಗೆ ಬರುವ ಅವುಗಳಿಗೆ ಆಹಾರ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT