ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಎರಡು ಬಾರಿ ಭೂಕಂಪನ, ಯಾವುದೇ ಪ್ರಾಣ ಹಾನಿ ಇಲ್ಲ

Last Updated 22 ನವೆಂಬರ್ 2020, 7:50 IST
ಅಕ್ಷರ ಗಾತ್ರ

ಸಿವನಿ: ಮಧ್ಯಪ್ರದೇಶದ ಸಿವನಿ ಜಿಲ್ಲೆಯಲ್ಲಿ ಭಾನುವಾರ ಎರಡು ಸಾರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ ತೀವ್ರತೆಯ ಪ್ರಮಾಣ 4.3 ಮತ್ತು 2.7ರಷ್ಟು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಯಾವುದೇ ಪ್ರಾಣ ಹಾನಿ, ಆಸ್ತಿ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದರು.

‘ಶನಿವಾರ ತಡರಾತ್ರಿ 1.45 ಕ್ಕೆ 4.3 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ಸಿವನಿ ನಗರದ ಬಳಿ 10 ಕಿ.ಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಬಳಿಕ ಅದೇ ಸ್ಥಳದಲ್ಲಿ ಭಾನುವಾರ ಬೆಳಿಗ್ಗೆ 6.23ಕ್ಕೆ 2.7 ತೀವ್ರತೆಯಲ್ಲಿ ಭೂಕಂಪನವಾಗಿದೆ’ ಎಂದು ಐಎಂಡಿಯ ಭೋಪಾಲ್‌ ಕೇಂದ್ರದ ವಿಜ್ಞಾನಿ ವೇದ್‌ ಪ್ರಕಾಶ್‌ ಸಿಂಗ್‌ ಅವರು ಮಾಹಿತಿ ನೀಡಿದರು.

‘ಮೊದಲ ಭೂಕಂಪನದ ವೇಳೆ ಮನೆಯ ವಸ್ತುಗಳು, ಮಂಚ, ಕಿಟಕಿಗಳು ಸುಮಾರು 15 ಸೆಕೆಂಡ್‌ಗಳ ತನಕ ನಡುಗಿದವು’ ಎಂದು ಸ್ಥಳೀಯ ನಿವಾಸಿ ಪ್ರವೀಣ್‌ ತಿವಾರಿ ಅವರು ಹೇಳಿದರು.

‘ಪೊಲೀಸರು, ಗೃಹರಕ್ಷಕರು, ಆರೋಗ್ಯ ಮತ್ತು ಆಡಳಿತ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಹುಲ್ ಹರಿದಾಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT