ಭಾನುವಾರ, ನವೆಂಬರ್ 27, 2022
20 °C

ದಡಾರ: ಮುಂಬೈಯಲ್ಲಿ 12 ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ‘ನಗರದಲ್ಲಿ ಬುಧವಾರ ಹೊಸದಾಗಿ 13 ದಡಾರ ‍ಪ್ರಕರಣಗಳು ಪತ್ತೆಯಾಗಿದ್ದು, ಮಗುವೊಂದು ಮೃತಪಟ್ಟಿದೆ. ಇದರೊಂದಿಗೆ ಈ ವರ್ಷ ದಡಾರದಿಂದ ಸಾವಿಗೀಡಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ’ ಎಂದು ಬೃಹತ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ.

‘ಭಿವಂಡಿಯಲ್ಲಿ ಎಂಟು ತಿಂಗಳ ಗಂಡು ಮಗುವಿಗೆ ರೋಗ ಬಾಧಿಸಿತ್ತು. ಆ ಮಗು ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಸಂಜೆ ಅಸುನೀಗಿದೆ. ಈ ರೋಗದಿಂದ ಬಳಲುತ್ತಿದ್ದ ಒಟ್ಟು 30 ಮಂದಿ ಬುಧವಾರ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಈ ಪೈಕಿ 22 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ’ ಎಂದು ಬಿಎಂಸಿ ಪ್ರಕಟಣೆ ಹೇಳಿದೆ.

‘ಬಿಎಂಸಿ ನಡೆಸಿರುವ ಸಮೀಕ್ಷೆಯಲ್ಲಿ 156 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ವರ್ಷ ಒಟ್ಟು 233 ದಡಾರ ಪ‍್ರಕರಣಗಳು ವರದಿಯಾಗಿವೆ’ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು