ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದ್ರಾ ಬಂದರು ಡ್ರಗ್ಸ್‌ ಪ್ರಕರಣ: ಆರೋಪಿ ಅಫ್ಗನ್ ಪ್ರಜೆ 3 ದಿನ ಎನ್‌ಐಎ ವಶಕ್ಕೆ

Last Updated 26 ಅಕ್ಟೋಬರ್ 2021, 7:31 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಕಳೆದ ತಿಂಗಳು 2,988 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಬಂಧಿತನಾಗಿದ್ದ ಅಫ್ಗಾನಿಸ್ತಾನದ ಪ್ರಜೆಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ಮೂರು ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್‌ಐಎ) ವಶಕ್ಕೆ ನೀಡಿದೆ.

ಆರೋಪಿ ಮೊಹಮ್ಮದ್ ಖಾನ್‌ರನ್ನು ಟ್ರಾನ್ಸಿಟ್‌ ವಾರಂಟ್‌ ಮೇಲೆ ಸೋಮವಾರ ಪಟಿಯಾಲದಿಂದ ಇಲ್ಲಿಗೆ ಕರೆತರಲಾ ಯಿತು. ನಂತರ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಶುಭದಾ ಬಕ್ಷಿ ಆರೋಪಿಯನ್ನು ಎನ್‌ಐಎ ವಶಕ್ಕೆ ನೀಡಿದರು. ಎನ್‌ಐಎ ನಾಲ್ಕು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ವಿಶೇಷ ನ್ಯಾಯಾಲಯವನ್ನು ಕೋರಿತ್ತು.

21 ಸಾವಿರ ಕೋಟಿ ಮೊತ್ತದ ಹೆರಾಯಿನ್ ವಶಪಡಿಸಿಕೊಂಡ ಈ ಪ್ರಕರಣದ ಮೂರು ಆರೋಪಿಗಳನ್ನು ನ್ಯಾಯಾಲಯ ಅಕ್ಟೋಬರ್ 18ರಂದು 10 ದಿನಗಳ ಕಾಲ ಎನ್‌ಐಎ ವಶಕ್ಕೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT