ಮಗ ‘ರಾಜಧರ್ಮ’, ನಾನು ‘ರಾಷ್ಟ್ರಧರ್ಮ’ ಪಾಲಿಸುತ್ತಿದ್ದೇನೆ: ಯಶವಂತ ಸಿನ್ಹಾ

ನವದೆಹಲಿ: ‘ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯು ವೈಯಕ್ತಿಕ ಸ್ಪರ್ಧೆಗಿಂತ ಮಹತ್ವದ್ದಾಗಿದ್ದು, ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಮುಂದಿಡುವ ಹೆಜ್ಜೆಯಾಗಿದೆ’ ಎಂದು ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಭಾನುವಾರ ತಿಳಿಸಿದ್ದಾರೆ.
ಪುತ್ರ ಹಾಗೂ ಬಿಜೆಪಿ ಸಂಸದ ಜಯಂತ ಸಿನ್ಹಾ ಬೆಂಬಲ ಲಭಿಸದಿರುವುದಕ್ಕೆ ಯಾವುದೇ ಧರ್ಮ ಸಂಕಟವಿಲ್ಲ. ಆತ ತನ್ನ ‘ರಾಜಧರ್ಮ’ವನ್ನು ಪಾಲಿಸುತ್ತಿದ್ದಾನೆ. ನಾನು ನನ್ನ ‘ರಾಷ್ಟ್ರಧರ್ಮ’ವನ್ನು ಪಾಲಿಸುತ್ತಿದ್ದೇನೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
VIDEO | ಚಾಮರಾಜನಗರ: ವಾಹನಗಳ ಮೇಲೆ ದಾಳಿಗೆ ಯತ್ನಿಸಿದ ಆನೆಗಳು
‘ಸರ್ಕಾರದ ಸರ್ವಾಧಿಕಾರಿ ನೀತಿಗಳನ್ನು ಪ್ರತಿರೋಧಿಸಬೇಕು ಎಂಬ ಸಂದೇಶವನ್ನು ಈ ಚುನಾವಣೆಯ ಮೂಲಕ ಭಾರತದ ಜನತೆಗೆ ನೀಡುತ್ತಿದ್ದೇವೆ’ ಎಂದಿದ್ದಾರೆ.
‘ಒಬ್ಬ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಆಯ್ಕೆ ಮಾಡುವುದರಿಂದ ಇಡೀ ಸಮುದಾಯದ ಉನ್ನತಿಯಾಗುವುದಿಲ್ಲ. ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿಸಿರುವುದು ಬಿಜೆಪಿಯ ರಾಜಕೀಯ ಸಂಕೇತವಷ್ಟೇ’ ಎಂದೂ ಹೇಳಿದ್ದಾರೆ.
ಇಡೀ ಸಮುದಾಯದ ಉನ್ನತಿಯು ಸರ್ಕಾರವು ಅನುಸರಿಸುವ ನೀತಿಗಳ ಮೇಲೆ ಅವಲಂಬಿತವಾಗಿದೆ ಎಂದೂ ಯಶವಂತ ಸಿನ್ಹಾ ಅವರು ಪ್ರತಿಪಾದಿಸಿದ್ದಾರೆ.
ಸಿಎಂ ಭಗವಂತ ಮಾನ್ ಪ್ರತಿನಿಧಿಸುತ್ತಿದ್ದ ಸಂಗ್ರೂರ್ ಕ್ಷೇತ್ರದಲ್ಲಿ ಎಎಪಿಗೆ ಸೋಲು
‘ಇಂದು ನಮ್ಮ ದೇಶದಲ್ಲಿ ರಾಜಕೀಯವು ಹಲವು ದೌರ್ಬಲ್ಯಗಳನ್ನು ಒಳಗೊಂಡಿದೆ. ಇದು ಜನರು ಬೀದಿಗಿಳಿಯುವಂತೆ ಮಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಹೀಗಾಗಬಾರದು’ ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.