ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಹಿಂಸಾಚಾರದಿಂದ ಜನರಿಗೆ ರಕ್ಷಣೆ: ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ

Last Updated 5 ಮೇ 2021, 10:01 IST
ಅಕ್ಷರ ಗಾತ್ರ

ಕೋಲ್ಕತ್ತ: ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಪಶ್ಚಿಮ ಬಂಗಾಳದ ಜನರನ್ನು ರಾಜಕೀಯ ಹಿಂಸಾಚಾರದ ಸರಪಳಿಯಿಂದ ರಕ್ಷಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಾಂಕೇತಿಕವಾಗಿ ಪ್ರತಿಜ್ಞೆ ಮಾಡಿದರು.

ಕೋಲ್ಕತ್ತದ ಗಾಂಧಿ ಪ್ರತಿಮೆ ಬಳಿಮಂಗಳವಾರ ನಡೆದ ಧರಣಿಯಲ್ಲಿ ಭಾಗವಹಿಸಿದ ಅವರು,‘ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದಲ್ಲಿ ವ್ಯಾಪಕವಾಗಿ ಹಿಂಸಾಚಾರ ನಡೆದಿದೆ. ಈ ಬಗ್ಗೆ ನಾವು ದೇಶಕ್ಕೆ ತಿಳಿಯುವಂತೆ ಮಾಡುತ್ತೇವೆ’ ಎಂದರು.

‘ದೌರ್ಜನ್ಯಕ್ಕೊಳಗಾದ ‍ಪಕ್ಷದ ಸದಸ್ಯರಿಗೆ ನೆರವು ಒದಗಿಸಲು ನಾನು ಉತ್ತರ ಪರಗಣ ಜಿಲ್ಲೆಗೆ ಭೇಟಿ ನೀಡುತ್ತೇನೆ. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರದ ಬಗ್ಗೆ ನಾವು ದೇಶದ ಜನತೆಗೆ ಹೇಳಲು ಬಯಸುತ್ತೇವೆ’ ಎಂದು ಅವರು ತಿಳಿಸಿದರು

‘ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೆಲುವು ಸಾಧಿಸಿದ ಬಳಿಕ ನಡೆದ ಹಿಂಸಾಚಾರದಲ್ಲಿ ಒಬ್ಬ ಮಹಿಳೆ ಸೇರಿದಂತೆ ಪಕ್ಷದ ಆರು ಮಂದಿ ಕಾರ್ಯಕರ್ತರು ಮೃತಪಟ್ಟಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

‘ನಾವು ಪಶ್ಚಿಮ ಬಂಗಾಳದ ಜನರ ಕನಸು ನನಸಾಗಲು ಸಹಾಯ ಮಾಡುತ್ತೇವೆ. ರಾಜಕೀಯ ಹಿಂಸಾಚಾರಕ್ಕೆ ಇತಿಶ್ರೀ ಹಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ’ ಎಂದು ಅವರು ಹೇಳಿದರು.

ಈ ವೇಳೆ ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್‌ ಘೋಶ್‌ ಕೂಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT