ಮುಂಬೈ: ಕೇಂದ್ರ ಸಚಿವ ನಾರಾಯಣ ರಾಣೆ ಅವರು 2021ರಲ್ಲಿ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ನೀಡಿರುವ ಹೇಳಿಕೆ ‘ಅಸಾಂವಿಧಾನಿಕ’. ಆದರೆ ಅದು ಹಗೆತನವನ್ನು ಉತ್ತೇಜಿಸುವಂತಿಲ್ಲ, ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೇಳಿದೆ.
ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ರಾಯಗಢದ ಸಿಜೆಎಂ ನ್ಯಾಯಾಧೀಶ ಎಸ್.ಡಬ್ಲ್ಯು ಉಗಳೆ ಅವರು, ಆರೋಪಿ ನೀಡಿದ ಹೇಳಿಕೆಯು ‘ವಿವಾದಾತ್ಮಕ ಮತ್ತು ರಾಜಕೀಯವಾಗಿ ಸಂವೇದನಾರಹಿತ’ ಎಂದು ಹೇಳಬಹುದು. ಕೇಂದ್ರ ಸಚಿವ ಸ್ಥಾನ ಹುದ್ದೆ ಅಲಂಕರಿಸಿರುವ ವ್ಯಕ್ತಿಯಿಂದ ಇಂಥ ಹೇಳಿಕೆ ನಿರೀಕ್ಷಿಸಿರಲಿಲ್ಲ. ಆದರೆ ಲಭ್ಯವಿರುವ ದಾಖಲೆಗಳು ರಾಣೆ ಅವರ ವಿರುದ್ಧದ ಎಲ್ಲ ಆರೋಪಗಳನ್ನು ಪುಷ್ಠೀಕರಿಸುವುದಿಲ್ಲ. ಹಾಗಾಗಿ ಈ ಆರೋಪಗಳು ‘ಆಧಾರರಹಿತ’ ಎಂದು ಅವರನ್ನು ದೋಷ ಮುಕ್ತಗೊಳಿಸಿದರು.
‘ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವರ್ಷವೇ ತಿಳಿಯದೇ ಇರುವುದು ನಾಚಿಕೆಗೇಡಿನ ಸಂಗತಿ. ಆ ಸಂದರ್ಭದಲ್ಲಿ ನಾನು ಇದ್ದಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ’ ಎಂದು ರಾಣೆ ಹೇಳಿದ್ದರು. ಈ ಸಂಬಂಧ ಅವರ ವಿರುದ್ಧ 2021ರಲ್ಲಿ ಪ್ರಕರಣ ದಾಖಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.