ಮಂಗಳವಾರ, ನವೆಂಬರ್ 24, 2020
26 °C

ಲಾಕ್‌ಡೌನ್, ನೋಟು ರದ್ದತಿಯಿಂದಾಗಿ ಅಸಂಖ್ಯಾತ ಮನೆಗಳು ನಾಶವಾಗಿವೆ: ರಾಹುಲ್ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Rahul gandhi

ನವದೆಹಲಿ: ಲಾಕ್‍ಡೌನ್ ಮತ್ತು ನೋಟು ರದ್ದತಿಯಿಂದಾಗಿ ಮೋದಿ ಸರ್ಕಾರ ಅಸಂಖ್ಯಾತ ಮನೆಗಳನ್ನು ನಾಶ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಲಾಕ್‍ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಕುಟುಂಬವೊಂದರ ಯುವತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಟ್ಯಾಗ್ ಮಾಡಿ ರಾಹುಲ್ ಈ ರೀತಿ ಟ್ವೀಟಿಸಿದ್ದಾರೆ.

ಆ ಯುವತಿಯ ಸಾವಿಗೆ ಸಂತಾಪಗಳು, ಸರ್ಕಾರ ಉದ್ದೇಶಪೂರ್ವಕ ಮಾಡಿದ ನೋಟು ರದ್ದತಿ ಮತ್ತು  ದೇಶವ್ಯಾಪಿ ಲಾಕ್‍ಡೌನ್‍ನಿಂದಾಗಿ ಹಲವಾರು ಮನೆಗಳು ನಿರ್ನಾಮವಾಗಿವೆ. ಇದೇ ಸತ್ಯ ಎಂದಿದ್ದಾರೆ ರಾಹುಲ್.

ದೆಹಲಿಯ ಲೇಡಿ ಶ್ರೀರಾಮ್ ಮಹಿಳಾ ಕಾಲೇಜಿನ (ಎಲ್‍ಎಸ್‌ಆರ್) 2ನೇ ವರ್ಷ ಪದವಿ ವಿದ್ಯಾರ್ಥಿನಿ ಐಶ್ವರ್ಯಾ ತನ್ನ ಹುಟ್ಟೂರು  ತೆಲಂಗಾಣದಲ್ಲಿ ನವೆಂಬರ್ 2ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮನೆಯಲ್ಲಿ ಆರ್ಥಿಕ ತೊಂದರೆ ಇದ್ದ ಕಾರಣ ಶಿಕ್ಷಣ  ಮುಂದುವರಿಸುವ ಬಗ್ಗೆ ಆಕೆಗೆ ಆತಂಕವಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು