ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ‘ಭಾರತ್ ಬಯೋಟೆಕ್‌' ಫೆಸಿಲಿಟಿ ಕೇಂದ್ರಕ್ಕೆ ಪ್ರಧಾನಿ ಭೇಟಿ

Last Updated 27 ನವೆಂಬರ್ 2020, 5:20 IST
ಅಕ್ಷರ ಗಾತ್ರ

ಹೈದರಾಬಾದ್‌: ‘ಕೋವಿಡ್‌ 19‘ರ ಚಿಕಿತ್ಸೆಗಾಗಿ ಲಸಿಕೆ ತಯಾರಿಸುತ್ತಿರುವ ಹೈದರಾಬಾದ್‌ನ ಭಾರತ್‌ ಬಯೋಟೆಕ್ಸ್‌ ಕೇಂದ್ರಕ್ಕೆಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಭೇಟಿ ನೀಡಲಿದ್ದಾರೆ ಎಂದು ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ತಿಳಿಸಿದ್ದಾರೆ.

ಪುಣೆಯಿಂದ ಭಾರತೀಯ ವಾಯುಪಡೆ ವಿಮಾನದ ಮೂಲಕ ಪ್ರಯಾಣ ಬೆಳೆಸುವ ಮೋದಿಯವರು ಮಧ್ಯಾಹ್ನದ ನಂತರ ಇಲ್ಲಿನ ಹಾಕಿಂಪೇಟೆ ವಾಯುಪಡೆ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಮೋದಿಯವರು ವಾಯುಪಡೆ ನಿಲ್ದಾಣದಿಂದ ನೇರವಾಗಿ ಜಿನೋಮ್ ವ್ಯಾಲಿಯಲ್ಲಿರುವ ಭಾರತ್ ಬಯೋಟೆಕ್ಸ್‌ ಫೆಸಿಲಿಟಿ ಕೇಂದ್ರಕ್ಕೆ ಭೇಟಿ ನೀಡುತ್ತಾರೆ.‌ ಬಯೋಟೆಕ್ ಕೇಂದ್ರದಲ್ಲಿ ಒಂದು ಗಂಟೆ ಕಾಲ, ಲಸಿಕೆ ಉತ್ಪಾದನೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ವೀಕ್ಷಿಸಿ, ಅದೇ ದಿನ ಸಂಜೆ ಹೊತ್ತಿಗೆ ನವದೆಹಲಿಗೆ ವಾಪಾಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತ್ ಬಯೋಟೆಕ್ ಕಂಪನಿ ಕೋವಿಡ್‌ 19 ವಿರುದ್ಧದ ಕೋವ್ಯಾಕ್ಸಿನ್‌ ಲಸಿಕೆ ತಯಾರಿಸುತ್ತಿದ್ದು, ಅದು ಸದ್ಯ ಮೂರನೇ ಹಂತದ ಕ್ಲಿನಿಕಲ್ ಟ್ರೈಯಲ್‌ನಲ್ಲಿದೆ.

‘ಮೋದಿಯವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾರತ್‌ ಬಯೋಟೆಕ್‌ನಲ್ಲಿನ ಲಸಿಕೆ ತಯಾರಿಕೆ ಮತ್ತು ವಿತರಣೆ ಕುರಿತು ಚರ್ಚೆ ಮಾಡುತ್ತಾರೆ’ ಎಂದು ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT