ಸಾಗರ ಗಡಿಯಲ್ಲಿ ಯಾವುದೇ ಬೆದರಿಕೆ ಎದುರಿಸಲು ನೌಕಾಪಡೆ ಸನ್ನದ್ಧ - ಕರಂವೀರ್ ಸಿಂಗ್

ನವದೆಹಲಿ: ಸಾಗರ ಗಡಿಯಲ್ಲಿ ಚೀನಾ ಸೇರಿದಂತೆ ಯಾವುದೇ ದೇಶದಿಂದ ಎದುರಾಗುವ ಬೆದರಿಕೆಯನ್ನು ಎದುರಿಸಲು ನೌಕಾಪಡೆ ಸದಾ ಸನ್ನದ್ಧವಾಗಿದೆ ಎಂದು ಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂವೀರ್ ಸಿಂಗ್ ಗುರುವಾರ ಹೇಳಿದರು.
ನೌಕಾಪಡೆ ದಿನದ ಅಂಗವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೂ ಮಹಾಸಾಗರದಲ್ಲಿ ಯಾವುದೇ ದೇಶದಿಂದ ಅತಿಕ್ರಮಣ ಕಂಡು ಬಂದಲ್ಲಿ ಅದನ್ನು ನಿಭಾಯಿಸಲು ನೌಕಾಪಡೆ ಪ್ರಮಾಣಿತ ಕಾರ್ಯಾಚರಣೆ ವಿಧಾನ ಹೊಂದಿದೆ’ ಎಂದು ಪರೋಕ್ಷವಾಗಿ ಚೀನಾಕ್ಕೆ ತಿರುಗೇಟು ನೀಡಿದರು.
ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ನಿರ್ಮಾಣವಾಗಿರುವ ಸಂಘರ್ಷ ಸ್ಥಿತಿಯನ್ನು ಪ್ರಸ್ತಾಪಿಸಿದ ಅವರು, ‘ಕಣ್ಗಾವಲಿಗಾಗಿ ಗಡಿಯಲ್ಲಿ ನೌಕಾಪಡೆಯ ಪಿ–81 ಯುದ್ಧವಿಮಾನ ಹಾಗೂ ಹೆರಾನ್ ಡ್ರೋನ್‌ಗಳನ್ನು ನಿಯೋಜಿಸಲಾಗಿದೆ’ ಎಂದರು.
ಸಾಗರದೊಳಗೆ ಕಾರ್ಯಾಚರಣೆ ಕೈಗೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವತ್ತಲೂ ಒತ್ತು ನೀಡಲಾಗಿದೆ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.