ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲರ ಬೇಡಿಕೆ ನ್ಯಾಯಬದ್ಧ,‌ ದಾರಿ ತಪ್ಪು: ಶೇ 45 ಮಂದಿ ಅಭಿಮತ

ಭಾರತದಲ್ಲಿ ಪೊಲೀಸಿಂಗ್ ಸ್ಥಿತಿ 2020-2021 ವರದಿ ಅಭಿಪ್ರಾಯ
Last Updated 25 ಆಗಸ್ಟ್ 2021, 4:28 IST
ಅಕ್ಷರ ಗಾತ್ರ

ನವದೆಹಲಿ: ನಕ್ಸಲರು ಹಾಗೂ ಬಂಡುಕೋರರ ಬೇಡಿಕೆಗಳು ನೈಜವಾದವು, ಆದರೆ ಅವರು ಆಯ್ದುಕೊಂಡ ದಾರಿ ಸರಿಯಲ್ಲ ಎಂದು ಶೇ 45ರಷ್ಟು ಪೊಲೀಸರು ಮತ್ತು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. ‘ಭಾರತದಲ್ಲಿ ಪೋಲಿಸಿಂಗ್ ಸ್ಥಿತಿ 2020-2021 ವರದಿ: ಸಂಘರ್ಷಪೀಡಿತ ಪ್ರದೇಶಗಳಲ್ಲಿ ಪೊಲೀಸರು’ ಎಂಬ ವರದಿಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದ್ದು, ಅಸಮಾನತೆ, ತಾರತಮ್ಯ ಮತ್ತು ನಿರುದ್ಯೋಗ ಇದಕ್ಕೆಲ್ಲಾ ಕಾರಣ ಎಂದು ಜನರು ಅನಿಸಿಕೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದೆ.

ಸಿಎಸ್‌ಡಿಎಸ್, ಲೋಕನೀತಿ, ಟಾಟಾ ಟ್ರಸ್ಟ್‌ ಮತ್ತು ಲಾಲ್ ಫ್ಯಾಮಿಲಿ ಫೌಂಡೇಶನ್ ಸಹಯೋಗದೊಂದಿಗೆ ಕಾಮನ್ ಕಾಸ್ ಎಂಬ ಎನ್‌ಜಿಒ ಈ ವರದಿಯನ್ನು ಸಿದ್ಧಪಡಿಸಿದೆ. ಆದಿವಾಸಿಗಳು, ಬಡವರು ಮೊದಲಾದ ಸಾಮಾಜಿಕ ಗುಂಪಿನ ಜನರು ಸಾಮಾನ್ಯವಾಗಿ ನಕ್ಸಲ್ ಸಂಘಟನೆಗಳಿಗೆ ಸೇರುತ್ತಾರೆ ಎಂಬ ಪೂರ್ವಗ್ರಹ ಪೊಲೀಸರು ಮತ್ತು ನಾಗರಿಕರಲ್ಲಿ ಇದೆ ಎಂದು ವರದಿ ತಿಳಿಸಿದೆ. ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಬಂಡುಕೋರ ಗುಂಪುಗಳು ಮತ್ತು ಭದ್ರತಾ ಪಡೆಗಳ ಗುರಿ ಮಹಿಳೆಯರೇ ಆಗಿರುತ್ತಾರೆ ಎಂದೂ ಹೇಳಿದೆ.

ಹಿಂಸೆಪೀಡಿತ 11 ರಾಜ್ಯಗಳಲ್ಲಿ ಸಮೀಕ್ಷೆ

ಜಮ್ಮು ಮತ್ತು ಕಾಶ್ಮೀರ

ಆಂಧ್ರಪ್ರದೇಶ

ತೆಲಂಗಾಣ

ಒಡಿಶಾ

ಛತ್ತೀಸ್‌ಗಡ

ಜಾರ್ಖಂಡ್

ಬಿಹಾರ

ಅಸ್ಸಾಂ

ತ್ರಿಪುರಾ

ನಾಗಾಲ್ಯಾಂಡ್

ಮಣಿಪುರ

ಸಮೀಕ್ಷೆ: ಯಾರ ಅಭಿಪ್ರಾಯ ಹೇಗಿದೆ...?

*‘ಸಂಘರ್ಷದ ಕಾರಣ ಕಾನೂನುಬದ್ಧ, ಆದರೆ ಅಳವಡಿಸಿಕೊಂಡ ವಿಧಾನ ತಪ್ಪು’ ಎಂದು ಅಭಿಪ್ರಾಯಪಟ್ಟವರು (%)

46;ಸಾಮಾನ್ಯ ಜನ

43;ಪೊಲೀಸ್ ಸಿಬ್ಬಂದಿ

42;ಎಸ್‌ಸಿ

59;ಎಸ್‌ಟಿ

43;ಒಬಿಸಿ

40;ಬಡವರು

44;ಕೆಳವರ್ಗದವರು

50;ಮಧ್ಯಮ ವರ್ಗದವರು

60;ಶ್ರೀಮಂತರು

*ನಕ್ಸಲರು ಮತ್ತು ಬಂಡುಕೋರ ಗುಂಪುಗಳು ‘ಅನಗತ್ಯ ಹಿಂಸಾಚಾರ’ ಹರಡುತ್ತವೆ ಎಂದವರ ಪ್ರಮಾಣ (%)

22;ಸಾಮಾನ್ಯ ಜನ

42;ಪೊಲೀಸರು

*ಈ ಗುಂಪುಗಳು ‘ಬಡವರ ಹಕ್ಕುಗಳಿಗಾಗಿ ಹೋರಾಟ’ ನಡೆಸುತ್ತಿವೆ ಎಂದು ನಂಬಿದವರು (%)

20;ಸಾಮಾನ್ಯ ಜನ

9;ಪೊಲೀಸರು

*ಬಂಡುಕೋರರು ಎಷ್ಟೇ ಅಪಾಯಕಾರಿಯಾಗಿದ್ದರೂ ಪೊಲೀಸರು ಅವರನ್ನು ಹಿಡಿಯಲು ಮತ್ತು ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟವರು (%)

75;ಪೊಲೀಸ್ ಸಿಬ್ಬಂದಿ

66;ಸಾಮಾನ್ಯ ಜನ

*ಎಂತಹ ಜನರು ಬಂಡಾಯ ಚಟುವಟಿಕೆಗಳಿಗೆ ಸೇರುವ ಅಥವಾ ಬೆಂಬಲಿಸುವ ಸಾಧ್ಯತೆಯಿದೆ ಎಂದು ಭಾವಿಸಿರುವ ಪೊಲೀಸರ ಪ್ರಮಾಣ (%)

26;ಆದಿವಾಸಿಗಳು ಅಥವಾ ಮೂಲನಿವಾಸಿಗಳು

11;ಬಡವರು

ಮಹಿಳೆಯರು ಯಾರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ? (%)

10;ಬಂಡುಕೋರ ಗುಂಪುಗಳು

7;ಪೊಲೀಸ್

5%ಸೇನೆ/ಅರೆಸೇನಾ ಪಡೆ

ನಕ್ಸಲರಾಗಲು ಪ್ರಮುಖ ಕಾರಣ (ಜನಸಾಮಾನ್ಯರ ಅಭಿಪ್ರಾಯ) (%)

14;ಅಸಮಾನತೆ, ಅನ್ಯಾಯ, ಶೋಷಣೆ ಮತ್ತು ತಾರತಮ್ಯದಿಂದ ಉಂಟಾದ ಅಸಮಾಧಾನ

13;ಬಡತನ

11;ನಿರುದ್ಯೋಗ

ನಕ್ಸಲರಾಗಲು ಪ್ರಮುಖ ಕಾರಣ (ಪೊಲೀಸರ ಅಭಿಪ್ರಾಯ) (%)

17;ನಿರುದ್ಯೋಗ

15;ಬಡತನ/ಹಸಿವು

ವಿಚಾರಣೆಯೋ.. ಹತ್ಯೆಯೋ..

ದಂಗೆಕೋರರು ಮತ್ತು ನಕ್ಸಲರಿಗೆ ನ್ಯಾಯಯುತ ವಿಚಾರಣೆ ನಡೆಸಬೇಕು ಎಂಬುದನ್ನು ಒಂದಷ್ಟು ಸಂಖ್ಯೆಯ ಪೊಲೀಸರು ಮತ್ತು ಜನರು ಬೆಂಬಲಿಸಿದ್ದಾರೆ. ಆದರೆ ‘ಅಪಾಯಕಾರಿ ನಕ್ಸಲರು/ದಂಗೆಕೋರನನ್ನು ಕೊಲ್ಲುವುದು ಕಾನೂನು ವಿಚಾರಣೆಗಿಂತ ಉತ್ತಮ’ ಎಂಬುದಾಗಿ ಐವರಲ್ಲಿ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT