ಶನಿವಾರ, ಏಪ್ರಿಲ್ 1, 2023
23 °C
46 ಸಾವಿರ ಹೊಸ ಪ್ರಕರಣಗಳು ವರದಿ; ಗುಣಮುಖ ಪ್ರಮಾಣ ಶೇ 97ಕ್ಕೆ ಏರಿಕೆ

Covid-19 India Update: ಕೋವಿಡ್‌ ದೃಢ ಪ್ರಮಾಣ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಶುಕ್ರವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್‌ ದೃಢ ಪ್ರಮಾಣ ಶೇ 2.48ರಷ್ಟು ದಾಖಲಾಗಿದೆ. ಕಳೆದ 25 ದಿನಗಳಿಂದ ದೇಶದಲ್ಲಿ ಸತತವಾಗಿ ಕೋವಿಡ್‌ ದೃಢ ಪ್ರಮಾಣ ಶೇ 5ಕ್ಕಿಂತ ಕಡಿಮೆ ದಾಖಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದೇ ಅವಧಿಯಲ್ಲಿ ಕೋವಿಡ್‌–19ನ 46,167 ಹೊಸ ಪ್ರಕರಣಗಳು ದಾಖಲಾಗಿದ್ದು, ಸೊಂಕಿತರ ಒಟ್ಟು ಸಂಖ್ಯೆ 3,04,58,251ಕ್ಕೇರಿದಂತಾಗಿದೆ.

ಇದನ್ನೂ ಓದಿ: ಪ್ರಜಾವಾಣಿ - ಡೆಕ್ಕನ್ ಹೆರಾಲ್ಡ್ ಕೋವಿಡ್-19 ಪರಿಹಾರ ನಿಧಿ

ಕಳೆದ ಒಂದು ದಿನದಲ್ಲಿ ಸತ್ತವರ ಸಂಖ್ಯೆ 853. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 4,00,312ಕ್ಕೆ ಏರಿದಂತಾಗಿದೆ. ದೇಶದಲ್ಲಿ ಕೋವಿಡ್‌ ಸೋಂಕಿನ ಸಕ್ರಿಯ ಪ್ರಕರಣಗಳು 5,09,637 ಇದ್ದು, ಇವು ಒಟ್ಟು ಪ್ರಕರಣಗಳ ಶೇ 1.65ರಷ್ಟಾಗಿವೆ. ಈ ನಡುವೆ ಕೋವಿಡ್‌ನಿಂದ ಗುಣಮುಖರಾಗುವವರ ಪ್ರಮಾಣ ಶೇ 97ರಷ್ಟು ಆಗಿದೆ. ದೇಶದಲ್ಲಿ ಗುರುವಾರ 18,80,026 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದೆ ಎಂದೂ ಸಚಿವಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು