ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಥಾರಿ ಹತ್ಯೆ ಪ್ರಕರಣ: ಸುರೀಂದರ್ ಕೋಲಿಗೆ ಗಲ್ಲುಶಿಕ್ಷೆ

ನಿಥಾರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ
Last Updated 19 ಮೇ 2022, 21:04 IST
ಅಕ್ಷರ ಗಾತ್ರ

ಘಾಜಿಯಾಬಾದ್: ನಿಥಾರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುರೀಂದರ್ ಕೋಲಿಗೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಎಸಗಿದ ಪ್ರಕರಣದಲ್ಲಿ ಸಿಬಿಐನ ವಿಶೇಷ ನ್ಯಾಯಾಲಯವು ಗಲ್ಲುಶಿಕ್ಷೆ ವಿಧಿಸಿದೆ.

ಕೋಲಿ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕ ಮತ್ತು ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ್‌ಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಕೇಶ್ ತ್ರಿಪಾಠಿ ಏಳು ವರ್ಷಗಳ ಜೈಲುಶಿಕ್ಷೆ ವಿಧಿಸಿದ್ದಾರೆ.

2009ರಲ್ಲಿ ಪಂಧೇರ್‌ನ ಬಂಗಲೆಯಲ್ಲಿ ಸುರೀಂದರ್ ಕೋಲಿ ಸುಮಾರು 19 ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ, ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಕೋಲಿಗೆ ಗಲ್ಲುಶಿಕ್ಷೆಯ ಜತೆಗೆ ₹ 62 ಸಾವಿರ ಹಾಗೂ ಮೋನಿಂದರ್‌ಗೆ ಜೈಲುಶಿಕ್ಷೆಯ ಜತೆಗೆ ₹ 4 ಸಾವಿರ ದಂಡ ವಿಧಿಸಲಾಗಿದೆ.

ಸುರೀಂದರ್‌ನನ್ನು ಅತ್ಯಾಚಾರ, ಹತ್ಯೆ, ಸಂಚು ರೂಪಿಸುವಿಕೆ ಮತ್ತು ಅಪರಾಧಗಳ ಪುರಾವೆಗಳನ್ನು ನಾಶಪಡಿಸಿದ ಅಪರಾಧಿ ಎಂದು ಪರಿಗಣಿಸಲಾಗಿದೆ. ಮೋನಿಂದರ್ ಸಿಂಗ್ ಮೇಲೆ ಮಾನವ ಕಳ್ಳಸಾಗಣೆಯ ಆರೋಪವಿದೆ.

ಸಿಬಿಐನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ದರ್ಶನ್ ಲಾಲ್ ಅವರು 83 ಸಾಕ್ಷಿಗಳನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT