ಮಂಗಳವಾರ, ಡಿಸೆಂಬರ್ 7, 2021
23 °C

ಉತ್ತರ ಪ್ರದೇಶ ವಿಧಾನಸಭೆ ಡೆಪ್ಯುಟಿ ಸ್ಪೀಕರ್‌ ಆಗಿ ನಿತಿನ್‌ ಅಗರವಾಲ್‌ ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಬಿಜೆಪಿ ಬೆಂಬಲಿತ, ಸಮಾಜವಾದಿ ಪಕ್ಷದ ಬಂಡಾಯ ಅಭ್ಯರ್ಥಿ ನಿತಿನ್‌ ಅಗರವಾಲ್‌ ಅವರು ಉತ್ತರಪ್ರದೇಶ ವಿಧಾನಸಭೆ ಡೆಪ್ಯುಟಿ ಸ್ಪೀಕರ್‌ ಆಗಿ ಸೋಮವಾರ ಆಯ್ಕೆಯಾದರು.

ಪಕ್ಷದ ಅಧಿಕೃತ ಅಭ್ಯರ್ಥಿ ನರೇಂದ್ರ ವರ್ಮಾ ಅವರನ್ನು ಅಗರವಾಲ್‌ ಅವರು 244 ಮತಗಳ ಅಂತರದಿಂದ ಪರಾಭವಗೊಳಿಸಿದರು.

ಚಲಾವಣೆಗೊಂಡ 368 ಮತಗಳ ಪೈಕಿ ನಾಲ್ಕು ಮತಗಳನ್ನು ಅಸಿಂಧು ಎಂದು ಘೋಷಿಸಲಾಯಿತು. ಅಗರವಾಲ್‌ ಅವರು 304 ಮತಗಳನ್ನು ಪಡೆದರು. ವಿರೋಧ ಪಕ್ಷಗಳಾದ ಬಿಎಸ್‌ಪಿ ಹಾಗೂ ಕಾಂಗ್ರೆಸ್‌ ಈ ಚುನಾವಣೆಯನ್ನು ಬಹಿಷ್ಕರಿಸಿದ್ದವು.

ಹರ್ದೋಯಿ ವಿಧಾನಸಭೆಯಿಂದ ಮೂರನೇ ಬಾರಿಗೆ ಆಯ್ಕೆಯಾಗಿರುವ ನಿತಿನ್‌, ಮಾಜಿ ಸಚಿವ ನರೇಶ್‌ ಅಗರವಾಲ್‌ ಅವರ ಪುತ್ರ. ನರೇಶ್‌ ಅವರು ಇತ್ತೀಚೆಗೆ ಸಮಾಜವಾದಿ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು