ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟೌಟ್ ಹಾಕಿಸಿಕೊಂಡು ದೊಡ್ಡ ನಾಯಕರಾಗಲು ಆಗಲ್ಲ: ಗಡ್ಕರಿ ಹೇಳಿದ್ದು ಯಾರಿಗೆ?

Last Updated 24 ಸೆಪ್ಟೆಂಬರ್ 2021, 9:45 IST
ಅಕ್ಷರ ಗಾತ್ರ

ನವದೆಹಲಿ: ಕಟೌಟ್‌ಗಳನ್ನು ಹಾಕುವ ಮೂಲಕ ದೊಡ್ಡ ನಾಯಕರಾಗಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ತಮ್ಮದೇ ಜನ್ಮದಿನದಂದು ದೊಡ್ಡ ಕಟೌಟ್‌ಗಳನ್ನು ಹಾಕಿ ಪ್ರಚಾರ ಪಡೆಯುವ ಕೆಲವು ರಾಜಕಾರಣಿಗಳನ್ನು ಉದ್ದೇಶಿಸಿ ಅವರು ವ್ಯಂಗ್ಯವಾಡಿದ್ದಾರೆ.

‘ಭಾರತೀಯ ಛಾತ್ರ ಸಂಸದ್‌’ನ ರಾಷ್ಟ್ರೀಯ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ರಾಜಕಾರಣಿಗಳು ತಾವೇ ಖರ್ಚು ಮಾಡಿಕೊಂಡು ನಗರಗಳು ಮತ್ತು ಪಟ್ಟಣಗಳಲ್ಲಿ ತಮ್ಮದೇ ಕಟೌಟ್‌ಗಳನ್ನು ಯಾಕೆ ಹಾಕಿಸಿಕೊಳ್ಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇದರಿಂದ ದೊಡ್ಡ ನಾಯಕರಾಗುವುದಂತೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

‘ಕಟೌಟ್‌ಗಳನ್ನು ಹಾಕುವ, ಜಾಹೀರಾತು ನೀಡುವ ಮೂಲಕ ದೊಡ್ಡ ನಾಯಕರಾಗಬಹುದೆಂದು ನೀವು ಭಾವಿಸುತ್ತೀರಾ? ಜಯಪ್ರಕಾಶ್ ನಾರಾಯಣ್, ಜಾರ್ಜ್ ಫರ್ನಾಂಡೀಸ್, ಅಟಲ್ ಬಿಹಾರಿ ವಾಜಪೇಯಿ ಈ ವಿಧಾನವನ್ನು ಅನುಸರಿಸಿದ್ದರೇ? ದಯಮಾಡಿ ಶಾರ್ಟ್‌ಕಟ್‌ಗಳನ್ನು ಬಳಸಬೇಡಿ, ಅದರಿಂದ ನಿಮ್ಮ ಘನತೆಗೇ ಕುಂದು’ ಎಂದು ಗಡ್ಕರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT