ಶನಿವಾರ, ಜೂನ್ 25, 2022
25 °C

ಭಾರತದಲ್ಲಿ ಗೋಧಿ ಕೊರತೆ ಇಲ್ಲ, ಬೇಕಾಬಿಟ್ಟಿ ರಫ್ತು ತಡೆಯಲು ನಿಷೇಧ ಹೇರಿಕೆ: ತೋಮರ್

‍ಪಿಟಿಐ Updated:

ಅಕ್ಷರ ಗಾತ್ರ : | |

ಗ್ವಾಲಿಯರ್: ದೇಶದಲ್ಲಿ ಗೋಧಿಯ ಕೊರತೆ ಇಲ್ಲ. ವಿದೇಶಕ್ಕೆ ಬೇಕಾಬಿಟ್ಟಿ ರಫ್ತಾಗುವುದನ್ನು ತಡೆಯಲು ರಫ್ತು ನಿಷೇಧ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

‘ದೇಶದಲ್ಲಿ ಗೋಧಿಯ ಕೊರತೆ ಇಲ್ಲ, ನಮಗೆ ರಾಷ್ಟ್ರೀಯ ಹಿತಾಸಕ್ತಿಯೇ ಮೊದಲು. ದೇಶೀಯ ಮಾರುಕಟ್ಟೆಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರದ ಕರ್ತವ್ಯ. ಅಧಿಕ ಪ್ರಮಾಣದ ಗೋಧಿ ರಫ್ತು ತಡೆಯಲು ನಿಷೇಧ ಹೇರಲಾಗಿದೆ. ನಾವು ದೇಶದ ಜನರ ಬೇಡಿಕೆಯನ್ನು ಪೂರೈಸಬೇಕು’ ಎಂದು ಅವರು ಹೇಳಿದ್ದಾರೆ.

ಏರುತ್ತಿರುವ ಶಾಖದಿಂದ ಉತ್ಪಾದನೆ ಕುಂಠಿತವಾಗುವ ಕಳವಳದ ನಡುವೆ ಏರುತ್ತಿರುವ ದೇಶೀಯ ಬೆಲೆಗಳನ್ನು ನಿಯಂತ್ರಿಸುವ ಕ್ರಮಗಳ ಭಾಗವಾಗಿ ಗೋಧಿ ರಫ್ತುಗಳ ಮೇಲೆ ನಿಷೇಧವನ್ನು ಘೋಷಿಸಲಾಯಿತು ಎಂದು ಹೇಳಿದ್ದಾರೆ.

ವಿದೇಶಗಳಲ್ಲಿ ಭಾರತದ ಗೋಧಿಗೆ ಬೇಡಿಕೆ ಹೆಚ್ಚಿರುವುದರಿಂದ 2021–22ರ ಅವಧಿಯಲ್ಲಿ ಭಾರತದ ರಫ್ತು ಪ್ರಮಾಣವು ಸಾರ್ವಕಾಲಿಕ ದಾಖಲೆಯ 70 ಲಕ್ಷ ಟನ್‌ಗಳಷ್ಟಾಗಿತ್ತು. ಇದರ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್ ಆಗಿದೆ.

ಭಾರತದ ಗೋಧಿ ರಫ್ತಿನ ಶೇಕಡ 50 ರಷ್ಟು ಬಾಂಗ್ಲಾದೇಶಕ್ಕೆ ಹೋಗುತ್ತದೆ.

‘ನಮ್ಮ ನೆರೆಯ ದೇಶಗಳು ನಮ್ಮ ಮೇಲೆ ಅವಲಂಬಿತವಾಗಿವೆ. ವಿಶ್ವದಾದ್ಯಂತ ಹಲವು ದೇಶಗಳು ಧಾನ್ಯಕ್ಕಾಗಿ ಭಾರತದತ್ತ ನೋಡುತ್ತವೆ. ನಮ್ಮ ನೆರೆಹೊರೆಯ ಬೇಡಿಕೆ ಪೂರೈಸುವ ಹೊಣೆಯೂ ನಮ್ಮ ಮೇಲಿದೆ’ ಎಂದು ತೋಮರ್ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು