ಶುಕ್ರವಾರ, ಡಿಸೆಂಬರ್ 2, 2022
20 °C

ನೋಯ್ಡಾದಲ್ಲಿ ನಾಯಿ ಕಚ್ಚಿದರೆ ಮಾಲೀಕನಿಗೆ ₹10 ಸಾವಿರ ದಂಡ!

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ:  ಭಾರತೀಯ ಸಾಕು‍ಪ್ರಾಣಿ ಹಿತರಕ್ಷಣಾ ಮಂಡಳಿ ಮಾರ್ಗಸೂಚಿಯಂತೆ ಸಾಕು ನಾಯಿ ದಾಳಿ ಮಾಡಿದರೆ ಮಾಲೀಕನಿಗೆ ₹10 ಸಾವಿರ ದಂಡ ವಿಧಿಸುವ ನಿರ್ಧಾರವನ್ನು ನೋಯ್ಡಾ ಪ್ರಾಧಿಕಾರ ತೆಗೆದುಕೊಂಡಿದೆ. 

ಇತ್ತೀಚಿನ ಮಾರ್ಗಸೂಚಿಯಂತೆ ಮುಂದಿನ ವರ್ಷ ಜ.31ರ ಒಳಗೆ ಮಾಲೀಕರು ತಮ್ಮ ಸಾಕುಪ್ರಾಣಿ ನೋಂದಣಿಗೊಳಿಸುವುದನ್ನು ಪ್ರಾಧಿಕಾರ ಕಡ್ಡಾಯಗೊಳಿಸಿದೆ. 

‘ನಾಯಿ/ಬೆಕ್ಕಿನಿಂದ ಯಾರಿಗಾದರೂ ಹಾನಿಯಾದರೆ, ಗಾಯಗೊಂಡ ವ್ಯಕ್ತಿ ಅಥವಾ ಪ್ರಾಣಿಯ ಚಿಕಿತ್ಸೆಯ ವೆಚ್ಚವನ್ನು ಸಾಕುಪ್ರಾಣಿಯ ಮಾಲೀಕರು ಭರಿಸಬೇಕು. ಜೊತೆಗೆ ಮಾ.1,2023ರಿಂದ ₹10 ಸಾವಿರ ದಂಡವನ್ನು ಪಾವತಿಸಬೇಕು’ ಎಂದು ಹೊಸ ನಿಯಮಕ್ಕೆ ಪ್ರಾಧಿಕಾರ ಅಂಗೀಕಾರ ನೀಡಿದೆ. 

ನಾಯಿಗೆ ರೇಬಿಸ್‌ ಇಂಜಕ್ಷನ್‌ ಕಡ್ಡಾಯ. ಇಲ್ಲವಾದಲ್ಲಿ ಪ್ರತಿ ತಿಂಗಳು ₹2000 ದಂಡ ಪಾವತಿಸಬೇಕು. ಪ್ರಾಧಿಕಾರದ 207ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು