ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಯ್ಡಾ: ಅವಳಿ ಗೋಪುರಗಳ ತೆರವು ಪ್ರಕ್ರಿಯೆ ಪ್ರಾರಂಭ

Last Updated 13 ಆಗಸ್ಟ್ 2022, 14:45 IST
ಅಕ್ಷರ ಗಾತ್ರ

ನೊಯ್ಡಾ: ನೋಯ್ಡಾದಲ್ಲಿ ಸೂಪರ್‌ಟೆಕ್‌ ಸಂಸ್ಥೆಯು ಅಕ್ರಮವಾಗಿ ನಿರ್ಮಿಸಿದ ಅವಳಿ ಗೋಪುರಗಳನ್ನು ಸ್ಫೋಟಕಗಳೊಂದಿಗೆ ನೆಲಸಮ ಮಾಡುವ ಪ್ರಕ್ರಿಯೆ ಶನಿವಾರ ಪ್ರಾರಂಭವಾಗಿದ್ದು, ಸುಮಾರು 100 ಮೀಟರ್‌ ವ್ಯಾಪ್ತಿಯ ಎಲ್ಲಾ ರಚನೆಗಳನ್ನು ಆಗಸ್ಟ್ 28 ರಂದು ಕೆಡವಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅವಳಿ ಗೋಪುರಗಳ ಕಟ್ಟಡಗಳಲ್ಲಿ ಸುಮಾರು 9,400 ರಂಧ್ರಗಳನ್ನು ಕೊರೆಯಲಾಗಿದ್ದು, 3,500 ಕೆಜಿಗಿಂತ ಹೆಚ್ಚು ಸ್ಫೋಟಕ ತುಂಬಿಸಿ, ನೆಲಸಮ ಮಾಡಲಾಗುತ್ತದೆ. ಮೊದಲ ಗುಂಪಿನ ಸ್ಫೋಟಕಗಳು ನೋಯ್ಡಾದ ಸೆಕ್ಟರ್ 93 ‘ಎ’ನಲ್ಲಿರುವ ಸ್ಥಳಕ್ಕೆ, ಬಿಗಿ ಪೊಲೀಸ್ ಭದ್ರತೆಯೊಂದಿಗೆ ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ತಲುಪಿದವು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋಪುರಗಳ ನೆಲಸಮ ಪ್ರಕ್ರಿಯೆ ಸುಮಾರು 15 ದಿನ ತೆಗೆದುಕೊಳ್ಳುತ್ತದೆ ಎಂದದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT