ಮಂಗಳವಾರ, ಡಿಸೆಂಬರ್ 7, 2021
27 °C

ಮದುವೆ ಮನೆ ಸಂಗೀತದಿಂದ ಕೋಳಿಗಳ ಸಾವು: ಒಡಿಶಾದಲ್ಲೊಂದು ವಿಚಿತ್ರ ಪ್ರಕರಣ

ಪಿಟಿಐ Updated:

ಅಕ್ಷರ ಗಾತ್ರ : | |

ಭುವನೇಶ್ವರ: ನೆರೆ ಮನೆಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ದೊಡ್ಡ ಸದ್ದಿನ ಸಂಗೀತ ಹಾಕಿದ್ದರಿಂದ ತಾವು ಸಾಕಿದ 60ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ ಎಂದು ಒಡಿಶಾದ ರೈತರೊಬ್ಬರು ಪೊಲೀಸರಿಗೆ ದೂರು ನೀಡಿದ ವಿಚಿತ್ರ ಘಟನೆ ನಡೆದಿದೆ.

ಬಾಲಾಸೋರ್‌ ಜಿಲ್ಲೆಯ ಕೋಳಿ ಸಾಕಣೆದಾರ ರೈತ ರಂಜಿತ್‌ ಪರಿದಾ ಮಂಗಳವಾರ ನೀಲಗಿರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೆಚ್ಚಿನ ಪ್ರಮಾಣದ ಸದ್ದನ್ನು ಕೇಳಿ ಕೋಳಿಗಳು ಸಾವನ್ನಪ್ಪಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಂಗೀತದ ಧ್ವನಿಯನ್ನು ಕಡಿಮೆ ಮಾಡುವಂತೆ ವರನ ಕುಟುಂಬಸ್ಥರಿಗೆ ಮನವಿ ಮಾಡಿದರೂ ಪರಿಗಣಿಸಿಲ್ಲ ಎಂದು ದೂರಿನಲ್ಲಿ ರಂಜಿತ್‌ ವಿವರಿಸಿದ್ದಾರೆ.

ಮದುವೆ ಮನೆಯಲ್ಲಿ ಸಂಗೀತವನ್ನು ಹಾಕಿದಾಗ ಗೂಡಿನೊಳಗಿದ್ದ ಕೋಳಿಗಳು ಬೆದರಿ ಅಡ್ಡಾದಿಡ್ಡಿ ಹಾರಾಡಿದವು. ನಂತರ ಕೆಲವು ಕುಸಿದು ಬಿದ್ದವು ಮತ್ತು ಸತ್ತು ಹೋದವು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಎಫ್‌ಐಆರ್‌ ದಾಖಲಿಸಿರುವ ಬಗ್ಗೆ ನೀಲಗಿರಿ ಪೊಲೀಸರು ದೃಢಪಡಿಸಿದ್ದಾರೆ. ಈ ವಿಚಾರವಾಗಿ ತನಿಖೆ ನಡೆಸುವುದಾಗಿಯೂ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು