ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಯ್‌ವಾಲಾ ಎಂದು ಅಪಹಾಸ್ಯ ಮಾಡಿದವರೆ ಚಹಾ ಎಲೆ ಮಾರುತ್ತಿದ್ದಾರೆ: ರಾಜನಾಥ್ ಸಿಂಗ್

Last Updated 23 ಮಾರ್ಚ್ 2021, 11:36 IST
ಅಕ್ಷರ ಗಾತ್ರ

ಲುಮ್ಡಿಂಗ್: ಈ ಮೊದಲು ನಮ್ಮ ಪ್ರಧಾನ ಮಂತ್ರಿಯನ್ನು 'ಚಾಯ್‌ವಾಲಾ' ಎಂದು ಕರೆಯುವ ಮೂಲಕ ಅಪಹಾಸ್ಯ ಮಾಡಲಾಯಿತು. ಇಂದು ಅದೇ ಜನರು ಚಹಾ ಎಲೆಗಳನ್ನು ಮಾರುತ್ತಿದ್ದಾರೆ ಮತ್ತು ಕೀಳುತ್ತಿದ್ದಾರೆ.ನಿಜವಾದ 'ಚಾಯ್‌ವಾಲಾ' ಅವರನ್ನು ಚಹಾ ತೋಟಗಳಿಗೆ ಕರೆತಂದಿದ್ದಾರೆ. ಆದರೆ ಜಾಗರೂಕರಾಗಿರಿ, ನೈಜ ಮತ್ತು ಪ್ರಮಾಣೀಕೃತ 'ಚಾಯ್‌ವಾಲಾ' ನಮ್ಮೊಂದಿಗಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ರಮ ವಲಸೆಯ ವಿಚಾರದಲ್ಲಿ ರಾಜಕೀಯ ಬೇಡ ಎಂದು ಎಲ್ಲರಿಗೂ ಮನವಿ ಮಾಡಿದರು. ಬಿಜೆಪಿ ಅಧಿಕಾರಕ್ಕೆ ಬರಲು ಮತ ಹಾಕಿದರೆ ಬಾಂಗ್ಲಾದೇಶದ ವಲಸಿಗರಿಗೆ ಅಸ್ಸಾಂನಲ್ಲಿ ವಾಸಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ನೆರೆಯ ದೇಶದಿಂದ ಒಳನುಸುಳುವಿಕೆಯನ್ನು ತಡೆಯಲು ಬಿಜೆಪಿ ಸರ್ಕಾರ ಅಸ್ಸಾಂನ ಇಂಡೋ-ಬಾಂಗ್ಲಾ ಗಡಿಯುದ್ದಕ್ಕೂ ಎಲೆಕ್ಟ್ರಾನಿಕ್ ಕಣ್ಗಾವಲು ಸ್ಥಾಪಿಸಿದೆ. 'ಅಕ್ರಮ ವಲಸೆಯ ವಿಚಾರವಾಗಿ ನಾವು ರಾಜಕೀಯಕ್ಕೆ ಎಡೆಮಾಡಿಕೊಡುವುದಿಲ್ಲ. ಅಸ್ಸಾಮಿಗಳ ಸಂಸ್ಕೃತಿ ಮತ್ತು ಗುರುತನ್ನು ರಕ್ಷಿಸಲಾಗುವುದು. ನಮಗೆ ಯಾವುದೇ ಕೆಟ್ಟ ಉದ್ದೇಶವಿದ್ದಿದ್ದೇ ಆದರೆ, ನಾವು ಡಾ.ಭೂಪೆನ್ ಹಜರಿಕಾ ಅವರಿಗೆ ಭಾರತ ರತ್ನವನ್ನು ನೀಡುತ್ತಿರಲಿಲ್ಲ ಎಂದು ಹೇಳಿದರು.

ದೀರ್ಘಕಾಲಿಕ ಪ್ರವಾಹದ ಸಮಸ್ಯೆಯ ಬಗ್ಗೆ ಮಾತನಾಡಿದ ಸಿಂಗ್, ಮತ್ತೊಮ್ಮೆ ಬಿಜೆಪಿ ಸರ್ಕಾರ ಮರು ಆಯ್ಕೆಯಾದರೆ, ಅದನ್ನು ಪರಿಹರಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT