ಸೋಮವಾರ, ಜುಲೈ 4, 2022
25 °C

ಭಾರತ 98 ದೇಶಗಳಿಗೆ 16.29 ಕೋಟಿ ಡೋಸ್‌ ಕೋವಿಡ್ ಲಸಿಕೆ ಪೂರೈಸಿದೆ: ಕೇಂದ್ರ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಫೆಬ್ರುವರಿ 21ರವರೆಗೆ ಭಾರತವು 16.29 ಕೋಟಿ ಡೋಸ್‌ ಕೋವಿಡ್ ಲಸಿಕೆಯನ್ನು ಇತರ 98 ದೇಶಗಳಿಗೆ ಪೂರೈಕೆ ಮಾಡಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್, ಲಸಿಕೆ ಡೋಸ್‌ಗಳನ್ನು ಭಾರತೀಯ ಲಸಿಕಾ ತಯಾರಕರು ಮತ್ತು ಗವಿ ಒಕ್ಕೂಟದ COVAX ಘಟಕದ ಮೂಲಕ ಅನುದಾನ-ಸಹಾಯ, ವಾಣಿಜ್ಯ ಮಾರಾಟದ ರೂಪದಲ್ಲಿ ಸರಬರಾಜು ಮಾಡಲಾಗಿದೆ ಎಂದು ಹೇಳಿದರು.

'ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, 2022ರ ಫೆಬ್ರುವರಿ 21ರ ವೇಳೆಗೆ ದೇಶದಿಂದ ಒಟ್ಟು 16.29 ಕೋಟಿ ಡೋಸ್ ಕೋವಿಡ್-19 ಲಸಿಕೆಯನ್ನು 98 ದೇಶಗಳಿಗೆ ಸರಬರಾಜು ಮಾಡಲಾಗಿದೆ' ಎಂದು ಅವರು ತಿಳಿಸಿದರು.

ಲಸಿಕೆಗಳು ಮತ್ತು ಔಷಧಗಳ ಜೊತೆಗೆ, ಸರ್ಕಾರವು ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳು, ವೆಂಟಿಲೇಟರ್‌ಗಳು, ರಕ್ಷಣಾತ್ಮಕ ಸಾಧನಗಳು, ಥರ್ಮಾಮೀಟರ್‌ಗಳು, ಮಾದರಿ ಟ್ಯೂಬ್‌ಗಳು, ಸ್ವ್ಯಾಬ್‌ಗಳು, ಸಿರಿಂಜ್‌ಗಳು, ಪರೀಕ್ಷಾ ಕಿಟ್‌ಗಳು ಇತ್ಯಾದಿಗಳನ್ನು 65 ದೇಶಗಳಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಪೂರೈಸಿದೆ ಎಂದು ಪವಾರ್ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು