ಶನಿವಾರ, ಸೆಪ್ಟೆಂಬರ್ 18, 2021
26 °C

ಸಿಬಿಎಸ್‌ಇ: 16,000ಕ್ಕೂ ಹೆಚ್ಚು 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಬಾಕಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 10ನೇ ತರಗತಿ ಪರೀಕ್ಷೆ ಫಲಿತಾಂಶವನ್ನು ಸಿಬಿಎಸ್‌ಇ ಮಂಗಳವಾರ ಪ್ರಕಟಿಸಿದ್ದು, ಇನ್ನೂ 16,000 ಕ್ಕಿಂತ ಹೆಚ್ಚು 10ನೇ ತರಗತಿ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ ಎಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ತಿಳಿಸಿದೆ.

10ನೇ ತರಗತಿಯ 20,97,128 ವಿದ್ಯಾರ್ಥಿಗಳ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಇವರ ಪೈಕಿ ಶೇ 99.04ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 16,639 ವಿದ್ಯಾರ್ಥಿಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದೆ.

ಈ ಫಲಿತಾಂಶಗಳ ಘೋಷಣೆಗೆ ಸಿಬಿಎಸ್‌ಇ ಇನ್ನೂ ಯಾವುದೇ ಸಮಯ ನಿಗದಿ ಮಾಡಿಲ್ಲ.

ಕೆಲವು ವಿಷಯಗಳಿಗೆ ಸಂಬಂಧಿಸಿದ ಅಂಕಗಳ ದತ್ತಾಂಶ ಲಭ್ಯವಾಗಿಲ್ಲ ಅಥವಾ ಫಲಿತಾಂಶ ಪ್ರಕಟಣೆಗಾಗಿ ಶಾಲೆಗಳು ನೀಡಲ್ಪಟ್ಟಿದ್ದ ಅಂಕಗಳಲ್ಲಿ ಕೆಲವು ಲೆಕ್ಕಾಚಾರದ ದೋಷಗಳಿದ್ದು, ಈ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

'ಸದ್ಯ ಶಾಲೆಗಳು ವಿದ್ಯಾರ್ಥಿಗಳ ಅಂಕಗಳನ್ನು ಮತ್ತೆ ಕಳುಹಿಸಲು ಕೇಳಲಾಗಿದೆ. ಅವು ಲಭ್ಯವಾದ ನಂತರ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು' ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋವಿಡ್‌–19 ಎರಡನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಸಿಬಿಎಸ್‌ಇ ರದ್ದುಪಡಿಸಿತ್ತು. ಬದಲಿಗೆ ಪರ್ಯಾಯ ಮೌಲ್ಯಮಾಪನ ಪದ್ಧತಿ ಅನುಸಾರ ಇಂದು 10ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿತ್ತು.

ಅಲ್ಲದೆ 12ನೇ ತರಗತಿಯ 65,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶವನ್ನು ಇನ್ನೂ ಸಿದ್ಧಪಡಿಸಲಾಗುತ್ತಿದ್ದು, ಆಗಸ್ಟ್ 5 ರೊಳಗೆ ಘೋಷಿಸಲಾಗುತ್ತದೆ ಎಂದು ಮಂಡಳಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಕಳೆದ ವಾರ ಸಿಬಿಎಸ್‌ಇ 12ನೇ ತರಗತಿ ಫಲಿತಾಂಶವನ್ನು ಪ್ರಕಟಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು