ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 60ರಷ್ಟು ಮಹಿಳೆಯರು ಇಂಟರ್‌ನೆಟ್‌ ಉಪಯೋಗಿಸಿಲ್ಲ: ಸಮೀಕ್ಷೆ

Last Updated 15 ಡಿಸೆಂಬರ್ 2020, 8:25 IST
ಅಕ್ಷರ ಗಾತ್ರ

ನವದೆಹಲಿ: ಭಾರತದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶೇ 60ರಷ್ಟು ಮಹಿಳೆಯರು ಇಂದಿನವರೆಗೂ ಇಂಟರ್‌ನೆಟ್‌ ಬಳಸಿಲ್ಲ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ (ಎನ್‌ಎಫ್‌ಎಚ್‌ಎಸ್‌) ತಿಳಿದುಬಂದಿದೆ.

ದೇಶದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗಿತ್ತು.

ಆಂಧ್ರ ಪ್ರದೇಶ (ಶೇ 21), ಅಸ್ಸಾಂ (ಶೇ28.2), ಬಿಹಾರ (ಶೇ 20.6), ಗುಜರಾತ್‌ (ಶೇ 30.8), ಕರ್ನಾಟಕ (ಶೇ 35), ಮಹಾರಾಷ್ಟ್ರ(ಶೇ 38 ), ಮೇಘಾಲಯ (ಶೇ 34.7), ತೆಲಂಗಾಣ (ಶೇ 26.5), ತ್ರಿ‍ಪುರ ( ಶೇ 22.9), ಪಶ್ಚಿಮ ಬಂಗಾಳ (ಶೇ 25.5), ದಾದ್ರ ಮತ್ತು ನಗರ್‌ಹವೇಲಿ, ದಿಯು ಮತ್ತು ದಮನ್‌ (ಶೇ 36.7), ಅಂಡಮಾನ್‌ ಮತ್ತು ನಿಕೋಬಾರ್‌ (ಶೇ 34.8) ಪ್ರದೇಶಗಳಲ್ಲಿ ಶೇಕಡಾ 40ಕ್ಕಿಂತ ಕಡಿಮೆ ಮಹಿಳೆಯರು ಇಂಟರ್‌ನೆಟ್‌ ಬಳಸುತ್ತಿದ್ದಾರೆ ಎಂದು ಸರ್ವೇ ತಿಳಿಸಿದೆ.

ಮಹಿಳೆಯರಿಗೆ ಹೋಲಿಸಿದರೆ ಪುರುಷರು ಇಂಟರ್‌ನೆಟ್‌ ಅನ್ನು ಹೆಚ್ಚಾಗಿ ಬಳಸುತ್ತಾರೆ. ಆಂಧ್ರಪ್ರದೇಶ (ಶೇ 48.8) ಅಸ್ಸಾಂ (ಶೇ 42.3) ಬಿಹಾರ(ಶೇ 43.6) ಮೇಘಾಲಯ (ಶೇ 42.1) ತ್ರಿಪುರ (ಶೇ 45.7) ಪಶ್ಚಿಮ ಬಂಗಾಳ (ಶೇ 46.7) ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ (ಶೇ 46.5) ರಷ್ಟು ಪುರುಷರು ಇಂಟರ್‌ನೆಟ್‌ ಎನ್ನುತ್ತದೆ ಸಮೀಕ್ಷೆ.

6.1 ಲಕ್ಷ ಮನೆಗಳಿಂದ ಜನಸಂಖ್ಯೆ, ಆರೋಗ್ಯ, ಕುಟುಂಬ ಯೋಜನೆ ಮತ್ತು ಪೌಷ್ಠಿಕಾಂಶಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಈ ಸಮೀಕ್ಷೆ ವೇಳೆ ಸಂಗ್ರಹಿಸಿಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT