ಭಾನುವಾರ, ಆಗಸ್ಟ್ 14, 2022
28 °C
ಬೆಳಿಗ್ಗೆ 9.10ಕ್ಕೆ ವೈಟ್‌ಫೀಲ್ಡ್ ತಲುಪಿದ 35ನೇ ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲು: ನೈರುತ್ಯ ರೈಲ್ವೆ

ಆಕ್ಸಿಜನ್ ಎಕ್ಸ್‌ಪ್ರೆಸ್‌ ಮೂಲಕ ಬೆಂಗಳೂರು ತಲುಪಿದ 98 ಟನ್‌ ವೈದ್ಯಕೀಯ ಆಮ್ಲಜನಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರು ಕ್ರಯೋಜನಿಕ್ ಕಂಟೇನರ್‌ಗಳಲ್ಲಿ 98.09 ಟನ್‌ ತೂಕದ ದ್ರವೀಕೃತ ವೈದ್ಯಕೀಯ ಆಮ್ಲಜನಕ(ಎಲ್‌ಎಂಒ) ಹೊತ್ತ '35ನೇ ಆಕ್ಸಿಜನ್ ಎಕ್ಸ್‌ಪ್ರೆಸ್‌‘ ‌ರೈಲು ಮಂಗಳವಾರ ಬೆಳಿಗ್ಗೆ ಬೆಂಗಳೂರು ತಲುಪಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಈವರೆಗೆ ಕರ್ನಾಟಕವು ರೈಲಿನ ಮೂಲಕ 3,959.51 ಟನ್ ಎಲ್ಎಂಒ ಸ್ವೀಕರಿಸಿದೆ. ‘35 ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಇಂದು ಬೆಳಿಗ್ಗೆ 9 ಗಂಟೆ 10 ನಿಮಿಷಕ್ಕೆ ಬೆಂಗಳೂರಿನ ವೈಟ್‌ಫೀಲ್ಡ್ ತಲುಪಿದೆ.‌ ಆಮ್ಲಜನಕದ ಕಂಟೇನರ್‌ಗಳನ್ನು ಹೊತ್ತ ರೈಲು ಜೂನ್ 13 ರಂದು ಸಂಜೆ 5 ಗಂಟೆಗೆ ‌ಗುಜರಾತ್‌ನ ಕನಾಲಸ್‌ನಿಂದ ಹೊರಟಿತ್ತು ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯ ರೈಲ್ವೆ ಇದುವರೆಗೆ 424 ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲುಗಳನ್ನು ದೇಶಾದ್ಯಂತ ಸಂಚರಿಸಿವೆ. ಇಷ್ಟು ರೈಲುಗಳು, 1,748 ಟ್ಯಾಂಕರ್‌ಗಳಲ್ಲಿ 30,455 ಟನ್‌ಗಿಂತಲೂ ಹೆಚ್ಚು ಎಲ್‌ಎಂಒಗಳನ್ನು ದೇಶದ ಹಲವು ಸ್ಥಳಗಳಿಗೆ ತಲುಪಿಸಿವೆ. ಕೋವಿಡ್ -19 ವಿರುದ್ಧದ ಹೋರಾಟದಲ್ಲಿ 15 ರಾಜ್ಯಗಳಿಗೆ ಪರಿಹಾರ ಸಾಮಗ್ರಿಗಳನ್ನೂ ವಿತರಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು