ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದ ಸಾಮರ್ಥ್ಯ ಬಿಂಬಿಸಲು ಸೋಂಕಿನಿಂದ ಮೂಡಿದ್ದ ವಾತಾವರಣ ಸಹಕಾರಿ‘

Last Updated 5 ಜನವರಿ 2021, 7:53 IST
ಅಕ್ಷರ ಗಾತ್ರ

ಬೀಜಿಂಗ್: ಕೊರೊನಾ ಸೋಂಕಿನಿಂದ ಮೂಡಿದ ಪರಿಸ್ಥಿತಿಯು ಭಾರತವು ಸದೃಢಗೊಳ್ಳಲು ಹಾಗೂ ಜಾಗತಿಕ ವೇದಿಕೆಯಲ್ಲಿ ತನ್ನ ಸಾಮರ್ಥ್ಯ ಬಿಂಬಿಸಲು ನೆರವಾಗಿದೆ ಎಂದು ಚೀನಾದಲ್ಲಿ ಭಾರತದ ರಾಯಭಾರಿ ವಿಕ್ರಂ ಮಿಸ್ರಿ ಹೇಳಿದ್ದಾರೆ.

ಹಾಂಗ್‌ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ ಪತ್ರಿಕೆಯಲ್ಲಿ ಪ್ರಕಟವಾದ ಇವರ ಅಭಿಪ್ರಾಯ ಆಧರಿಸಿದ ವರದಿಯಲ್ಲಿ, ಕೊರೊನಾ ಪರಿಸ್ಥಿತಿಯ ಪರಿಣಾಮಗಳನ್ನು ಅಂದಾಜಿಸುವುದು ಕಷ್ಟ ಸಾಧ್ಯ ಎಂದಿದ್ದಾರೆ.

ಆದರೆ, ಈ ಪರಿಸ್ಥಿತಿ ಅತಿದೊಡ್ಡ ಅನುಕೂಲ ಎಂದರೆ ಅಂತರರಾಷ್ಟ್ರೀಯ ಸಹಕಾರ, ಮುಖ್ಯವಾಗಿ ನಾವುಗಳು ಪರಸ್ಪರ ಹೆಚ್ಚು ಸಂಪರ್ಕಕ್ಕೆ ಬಂದಿದ್ದೇವೆ. ಭಾರತ ತನ್ನ ನೆರೆಹೊರೆಯವರ ಕುರಿತು ಹೆಚ್ಚಿನ ಗಮನಹರಿಸಲಿದೆ. ನೆರೆಹೊರೆ ದೇಶಗಳು ಇತಿಹಾಸ ಮತ್ತು ಸಂಸ್ಕೃತಿಯ ಭಾಗವಾಗಿವೆ. ಪ್ರಧಾನ ಮಂತ್ರಿಯವರ ‘ಸಾಗರ್‌‘ (ವಲಯದ ಎಲ್ಲ ಭಾಗಗಳ ಸುರಕ್ಷತೆ ಮತ್ತು ಅಭಿವೃದ್ಧಿ) ದೃಷಿಕೋನವೂ ಇದಕ್ಕೆ ಪೂರಕವಾಗಿದೆ ಎಂದು ಮಿಸ್ರಿ ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ವಿಶ್ವಕ್ಕೆ ಈ ಹೊತ್ತಿನಲ್ಲಿ ಹೆಚ್ಚು ವಿಶ್ವಾಸಾರ್ಹ ಮತ್ತು ಸಾಮರ್ಥ್ಯ ಪ್ರದರ್ಶಿಸುವ ದೇಶಗಳ ಅಗತ್ಯವಿದೆ. ಭಾರತ ಈ ಪಾತ್ರವನ್ನು ನಿರ್ವಹಿಸಲಿದೆ. ಸೋಂಕಿನ ಈ ಸಂದರ್ಭವು ಭಾರತದ ಸಾಮರ್ಥ್ಯವನ್ನೂ ಬಿಂಬಿಸಿದೆ. ತನ್ನ ರಕ್ಷಣೆಯ ಜೊತೆಗೆ ಜಾಗತಿಕವಾಗಿಯೂ ನೆರವು ನೀಡಲಿದೆ. ಆತ್ಮನಿರ್ಭರ ಭಾರತ್‌ ಧ್ಯೇಯವೂ ಸ್ವಾವಲಂಬನೆಗೆ ಪೂರಕವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT