ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್ಪುರ: ವೈದ್ಯರ ನಿರ್ಲಕ್ಷ್ಯದಿಂದ ಪರಮವೀರ ಚಕ್ರ ಪುರಸ್ಕೃತ ಯೋಧನ ಪುತ್ರನ ಸಾವು

ಕುಟುಂಬ ಸದಸ್ಯರ ಆರೋಪ
Last Updated 24 ಏಪ್ರಿಲ್ 2021, 8:56 IST
ಅಕ್ಷರ ಗಾತ್ರ

ಕಾನ್ಪುರ: ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಪರಮವೀರ ಚಕ್ರ ಪುರಸ್ಕೃತ ಸೇನಾ ಯೋಧ ಅಬ್ದುಲ್ ಹಮೀದ್ ಅವರ ಎರಡನೇ ಪುತ್ರ ಆಲಿ ಹಸನ್‌ (61) ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಇಲ್ಲಿನಲಾಲಾ ಲಜಪತ್‌ರಾಯ್ (ಎಲ್‌ಎಲ್‌ಆರ್‌) ಆಸ್ಪತ್ರೆಯವರು ಚಿಕಿತ್ಸೆ ನೀಡುವಲ್ಲಿ ತೋರಿದ ನಿರ್ಲಕ್ಷ್ಯವೇ ಹಸನ್ ಅವರ ಸಾವಿಗೆ ಕಾರಣ ಎಂದು ಹಸನ್ ಅವರ ಕುಟುಂಬದವರು ಆರೋಪಿಸಿದ್ದಾರೆ.

ಈ ನಡುವೆ, ‘ಹಮೀದ್ ಅವರ ಪುತ್ರರ ಸಾವಿನ ಬಗ್ಗೆ ಮಾಹಿತಿ ನೀಡಲಾಗಿದೆ‘ ಎಂದು ತಿಳಿಸಿದ ಜಿಎಸ್‌ವಿ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಆರ್‌.ಬಿ. ಕಮಲ್ ಅವರು, ಈ ವಿಷಯದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

‘ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಮ್ಮ ತಂದೆಯವರನ್ನು ಏಪ್ರಿಲ್ 21ರಂದು ಎಲ್‌ಎಲ್‌ಆರ್‌ ಆಸ್ಪತ್ರೆಗೆ ದಾಖಲಿಸಿದೆವು. ನಂತರ ವೈದ್ಯರು ಅವರಿಗೆ ಆಮ್ಲಜನಕದ ನೆರವು ನೀಡಿದರು. ನಾಲ್ಕು ಗಂಟೆಗಳ ನಂತರ, ‘ನಿಮ್ಮ ತಂದೆಯವರ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಆಮ್ಲಜನಕದ ಅಗತ್ಯವಿಲ್ಲ ಎಂದು ಅವರಿಗೆ ನೀಡಿದ್ದ ಆಮ್ಲಜನಕದ ನೆರವನ್ನು ತೆಗೆದುಬಿಟ್ಟರು‘ ಎಂದುಮೃತ ಹಸನ್‌ ಅವರ ಹಿರಿಯ ಪುತ್ರ ಸಲೀಂ ಸುದ್ದಿಗಾರರಿಗೆ ತಿಳಿಸಿದರು.

‘ನಂತರ ತಂದೆಯವರ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಗಮನಿಸಿದ ನಾನು, ಆಸ್ಪತ್ರೆಯ ಸಿಬ್ಬಂದಿ ಸಂಪರ್ಕಿಸಿ, ಆಮ್ಲಜನಕ ಸೌಲಭ್ಯ ನೀಡುವಂತೆ ಬೇಡಿಕೊಂಡೆ. ಆದರೆ, ನನ್ನ ವಿನಂತಿಗೆ ಅವರು ಸ್ಪಂದಿಸಲೇ ಇಲ್ಲ’ ಎಂದು ಸಲೀಂ ದೂರಿದರು.

‘ಇವರು 1965ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾಗಿ ದೇಶದ ಅತ್ಯುನ್ನತ ಮಿಲಿಟರಿ ಪುರಸ್ಕಾರ ಪರಮವೀರ ಚಕ್ರ ಪಡೆದ ‘ವೀರ್‌ ಅಬ್ದುಲ್ ಹಮೀದ್‌ ಅವರ ಎರಡನೇ ಪುತ್ರ‘ ಎಂದು ಆಸ್ಪತ್ರೆಯವರಿಗೆ ಕುಟುಂಬದವರು ತಿಳಿ ಹೇಳಿದರೂ, ಏನೂ ಪ್ರಯೋಜನವಾಗಲಿಲ್ಲ‘ ಎಂದು ಸಲೀಂ ಆರೋಪಿಸಿದರು.

‘ಆಸ್ಪತ್ರೆಗೆ ಬಂದಾಗಲೇ ಇಲ್ಲಿನ ಸಿಬ್ಬಂದಿ ಅವರಿಗೆ ಕೋವಿಡ್‌–19 ಪರೀಕ್ಷೆ ಮಾಡದೇ ನಿರ್ಲಕ್ಷ್ಯ ತೋರಿದರು. ನಮ್ಮ ಮನವಿಗೆ ಕಿವಿಗೊಡದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯವರ ನಿರ್ಲಕ್ಷ್ಯದಿಂದಾಗಿ ನಮ್ಮ ತಂದೆ ಮೃತಪಟ್ಟಿದ್ದಾರೆ‘ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT