ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೂದೆಗೆ ಅನುಮೋದನೆ ಪಡೆಯುವುದು ಪಾಪ್ಡಿ ಚಾಟ್ ಮಾಡಿದಂತೆಯೇ: ಡೆರೆಕ್‌ ಒಬ್ರಿಯಾನ್‌

Last Updated 2 ಆಗಸ್ಟ್ 2021, 9:59 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್‌ನಲ್ಲಿ ಚರ್ಚೆಯಿಲ್ಲದೇ ಮಸೂದೆಗಳಿಗೆ ಅನುಮೋದನೆ ಪಡೆಯುತ್ತಿರುವ ಬಗ್ಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್‌ ಒಬ್ರಿಯಾನ್‌ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮೊದಲ ಹತ್ತು ದಿನಗಳಲ್ಲಿ ಮೋದಿ–ಶಾ ಸರಾಸರಿ 7 ನಿಮಿಷಗಳಿಗೆ ಒಂದರಂತೆ ಮಸೂದೆಗಳಿಗೆ ಅನುಮೋದನೆ ಪಡೆದಿದ್ದಾರೆ. ಮಸೂದೆಗಳಿಗೆ ಅನುಮೋದನೆ ಪಡೆಯುವುದೇ ಅಥವಾ ‘ಪಾಪ್ಡಿ ಚಾಟ್’ ಮಾಡುವುದೇ’ ಎಂದು ಟ್ವೀಟ್ ಮೂಲಕ ಒಬ್ರಿಯಾನ್‌ ಪ್ರಶ್ನಿಸಿದ್ದಾರೆ. ಜತೆಗೆ ಯಾವ ಮಸೂದೆಗೆ ಎಷ್ಟು ನಿಮಿಷಗಳಲ್ಲಿ ಅನುಮೋದನೆ ಪಡೆಯಲಾಗಿದೆ ಎಂಬ ಪಟ್ಟಿಯನ್ನೂ ಲಗತ್ತಿಸಿದ್ದಾರೆ.

ಸಂಸತ್‌ನ ಮುಂಗಾರು ಅಧಿವೇಶನವು ಅತ್ಯಲ್ಪ ಅವಧಿಗೆ ಸೀಮಿತಗೊಂಡಿದ್ದು, ತೆರಿಗೆದಾರರ ₹133 ಕೋಟಿ ಹಣ ನಷ್ಟವಾಗಿದೆ ಎಂದು ಸರ್ಕಾರಿ ಮೂಲಗಳು ಇತ್ತೀಚೆಗೆ ತಿಳಿಸಿದ್ದವು.

ಅಧಿಕೃತ ಮೂಲಗಳು ಹಂಚಿಕೊಂಡಿದ್ದ ವಿವರಗಳ ಪ್ರಕಾರ, ರಾಜ್ಯಸಭೆಯು ನಿಗದಿತ ಸಮಯದ ಶೇ. 21ರಷ್ಟು ಕಾರ್ಯನಿರ್ವಹಿಸಿದ್ದರೆ, ಲೋಕಸಭೆಯಲ್ಲಿ ಶೇಕಡಾ 13ಕ್ಕಿಂತ ಕಡಿಮೆ ಅವಧಿಗೆ ಕಲಾಪ ನಡೆದಿತ್ತು. ಲೋಕಸಭೆಯು ಒಟ್ಟು 54 ಗಂಟೆಗಳಲ್ಲಿ ಕೇವಲ ಏಳು ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಿತ್ತು. ರಾಜ್ಯಸಭೆಯಲ್ಲಿ 53 ಗಂಟೆಗಳಲ್ಲಿ 11 ಗಂಟೆ ಮಾತ್ರ ಕಲಾಪ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT