ಗುರುವಾರ , ಫೆಬ್ರವರಿ 25, 2021
28 °C

‘ಗಾಬಾ ಟೆಸ್ಟ್’ ಗೆಲುವು ಸಕಾರಾತ್ಮಕ ಮನೋಭಾವದ ಪ್ರಾಮುಖ್ಯತೆಗೆ ಸಾಕ್ಷಿ: ಮೋದಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

PM Modi

ನವದೆಹಲಿ: ಸಕಾರಾತ್ಮಕ ಮನೋಭಾವವು ಸಕಾರಾತ್ಮಕ ಫಲಿತಾಂಶಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಆಸ್ಟ್ರೇಲಿಯಾ ವಿರುದ್ಧದ ‘ಗಾಬಾ ಟೆಸ್ಟ್’ ಪಂದ್ಯದಲ್ಲಿ ಭಾರತವು ಜಯ ಗಳಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದ್ದಾರೆ. ‘ಆತ್ಮ ನಿರ್ಭರ ಭಾರತ’ಕ್ಕೆ ಸಕಾರಾತ್ಮಕ ಮನೋಭಾವ ಅತಿ ಮುಖ್ಯ ಎಂದು ಅವರು ಹೇಳಿದ್ದಾರೆ.

ತೇಜ್‌ಪುರ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ‘ಆತ್ಮ ನಿರ್ಭರ ಭಾರತ’ಕ್ಕಾಗಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ಸುಧಾರಿತ ಸಂಪರ್ಕ, ಆರೋಗ್ಯ ಮತ್ತು ಶಿಕ್ಷಣದೊಂದಿಗೆ ಈಶಾನ್ಯದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂದು ಹೇಳಿದ್ದಾರೆ.

ಓದಿ: 

ಯುವ ಕ್ರಿಕೆಟಿಗರನ್ನು ಒಳಗೊಂಡ ತಂಡವನ್ನು ಶ್ಲಾಘಿಸಿದ ಮೋದಿ, ರಿಸ್ಕ್‌ ತೆಗೆದುಕೊಳ್ಳುವ ಮೂಲಕ ವೈಫಲ್ಯವನ್ನು ಮೀರಿ ನಿಲ್ಲಲು ಯತ್ನಿಸಬೇಕು. ‘ಆತ್ಮ ನಿರ್ಭರ ಭಾರತ’ ಯೋಜನೆಯು ನಮ್ಮ ಪ್ರತಿ ದಿನದ ಕೆಲಸಗಳ ಅಂಗವಾಗಿಬಿಟ್ಟಿದೆ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು