ಗುರುವಾರ , ಮೇ 26, 2022
32 °C

‘ರಾಷ್ಟ್ರೀಯ ನಾಯಕ’ ಎಂಬುದಕ್ಕೆ ಮೋದಿ ಮಾದರಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ರಾಷ್ಟ್ರೀಯ ನಾಯಕ ಹೇಗಿರಬೇಕು ಹಾಗೂ ಹೇಗೆ ರೂಪುಗೊಳ್ಳಬೇಕು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಈಗ ಮಾದರಿಯಾಗಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

‘ಈ ಹಿಂದೆ, ಯಾವುದೇ ಅರ್ಹತೆ ಇಲ್ಲದ ಹಾಗೂ ಒಂದು ಅಥವಾ ಎರಡು ಲೋಕಸಭಾ ಕ್ಷೇತ್ರಗಳಿಂದ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಇರುವ ವ್ಯಕ್ತಿಗೆ ‘ರಾಷ್ಟ್ರೀಯ ನಾಯಕ’ ಪಟ್ಟ ಕಟ್ಟಲಾಗುತ್ತಿತ್ತು’ ಎಂದೂ ಶಾ ಅಭಿಪ್ರಾಯಪಟ್ಟಿದ್ದಾರೆ.

ರೂಪ ಪಬ್ಲಿಕೇಷನ್ಸ್‌ ಹೊರತಂದಿರುವ ‘ಮೋದಿ@20 ಡ್ರೀಮ್ಸ್‌ ಮೀಟ್‌ ಡೆಲಿವರಿ’ ಎಂಬ ಪುಸ್ತಕದಲ್ಲಿ ಅಮಿತ್‌ ಶಾ ಅವರು ಬರೆದಿರುವ ಲೇಖನದಲ್ಲಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪುಸ್ತಕವು ಮೇ 11ರಂದು ಬಿಡುಗಡೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು