ಶನಿವಾರ, ಅಕ್ಟೋಬರ್ 31, 2020
27 °C

ಇದೇ 24ರಂದು ಪ್ರಧಾನಿಯೊಂದಿಗೆ ‘ಫಿಟ್‌ನೆಸ್‌ ಇಂಡಿಯಾ ಸಂವಾದ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಫಿಟ್‌ ಇಂಡಿಯಾ ದಿನ’ದ ವಾರ್ಷಿಕೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 24ರಂದು ಫಿಟ್‌ನೆಸ್‌ ಕುರಿತು ಪ್ರಭಾವ ಬೀರಬಲ್ಲವರೊಂದಿಗೆ ಮತ್ತು ನಾಗರಿಕರೊಂದಿಗೆ ಸಂವಾದ ನಡೆಸಲಿದ್ದಾರೆ.

‘ಫಿಟ್‌ನೆಸ್‌ ಇಂಡಿಯಾ ಸಂವಾದ’ದ ಹೆಸರಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಧಾನಿಯವರೊಂದಿಗೆ ಖ್ಯಾತ ಕ್ರಿಕೆಟಿಗ ವಿರಾಟ್ ಕೊಯ್ಲಿ, ರೂಪದರ್ಶಿ ಮತ್ತು ಓಟಗಾರ ಮಿಲಿಂದ್ ಸೋಮನ್‌, ಪೋಷಕಾಂಶ ತಜ್ಞೆ ರುಜುತಾ ದಿವೇಕರ್ ಮತ್ತು ಇತರ ಫಿಟ್‌ನೆಸ್‌ ಉತ್ತೇಜಿಸುವವರು ಭಾಗವಹಿಸಲಿದ್ದಾರೆ.

ಕೋವಿಡ್ -19ರ ಕಾಲದಲ್ಲಿ, ಫಿಟ್‌ನೆಸ್ ಎನ್ನುವುದು ಜೀವನದ ಪ್ರಮುಖ ಅಂಶವಾಗಿದೆ. ಈ ಸಂವಾದವು ಪೌಷ್ಠಿಕಾಂಶ, ಆರೋಗ್ಯ ಸೇರಿದಂತೆ ಫಿಟ್‌ನೆಸ್‌‌ ಸಂಬಂಧಿತ ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಲಿದೆ. ಇದೊಂದು ಸಮಯೋಚಿತ ಮತ್ತು ಫಲಪ್ರದ ಸಂವಾದವಾಗಲಿದೆ ಎಂದು ಪ್ರಧಾನಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಆನ್‌ಲೈನ್ ಮೂಲಕ ನಡೆಯುವ ಈ ಸಂವಾದದಲ್ಲಿ ಭಾಗವಹಿಸುವವರು ಫಿಟ್‌ನೆಸ್‌ ಕುರಿತು‌ ಟಿಪ್ಸ್‌ ನೀಡಲಿದ್ದಾರೆ. ಫೆಟ್‌ನೆಸ್‌‌ ಪಯಣದಲ್ಲಿನ ತಮ್ಮ ಅನುಭವ ಕಥನಗಳನ್ನು ಹಂಚಿಕೊಳ್ಳಲಿದ್ದಾರೆ. ಸಂವಾದದಲ್ಲಿ ಪ್ರಧಾನಿ ಮೋದಿಯವರು ಆರೋಗ್ಯಪೂರ್ಣ ಜೀವನದ ಬಗ್ಗೆ ತಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

‘ಫಿಟ್‌ ಇಂಡಿಯಾ’ ಸಂವಾದ ಕಾರ್ಯಕ್ರಮ ಇದೇ 24 ರಂದು ಬೆಳಿಗ್ಗೆ 11.30ಕ್ಕೆ ಆರಂಭವಾಗಲಿದೆ. ಆಸಕ್ತರು  https://pmindiawebcast.nic.in ಲಿಂಕ್‌ ಮೂಲಕ ಸಂವಾದದಲ್ಲಿ ಭಾಗವಹಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು