ಶುಕ್ರವಾರ, ಜನವರಿ 27, 2023
17 °C
ರಾಜ್ಯಸಭೆಯಲ್ಲಿ ಸಿಪಿಐ(ಎಂ) ಸದಸ್ಯರ ಪ್ರಶ್ನೆಗೆ ಕೇಂದ್ರ ಸರ್ಕಾರದ ಉತ್ತರ

ಕಳೆದ 5 ವರ್ಷದಲ್ಲಿ ಪ್ರಧಾನಿ ಮೋದಿಯವರ ವಿದೇಶ ಪ್ರವಾಸಕ್ಕೆ ಖರ್ಚಾಗಿದ್ದು ಎಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳೆದ ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ವಿದೇಶ ‍ಪ್ರವಾಸದ ಲೆಕ್ಕವನ್ನು ಕೇಂದ್ರ ಸರ್ಕಾರ ಸಂಸತ್‌ಗೆ ತಿಳಿಸಿದೆ.

ಕೇರಳದ ಸಿಪಿಐ(ಎಂ) ಸದಸ್ಯ ಎಳಮರಂ ಕರೀಂ ಅವರು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ, ವಿದೇಶಾಂಗ ವ್ಯವಹಾರ ಇಲಾಖೆಯ ರಾಜ್ಯ ಸಚಿವ ವಿ. ಮುರಳೀಧರನ್‌ ಅವರು ಉತ್ತರಿಸಿದರು.

ಕೆಲ ದಿನಗಳ ಹಿಂದಷ್ಟೇ ಇಂಡೋನೇಷ್ಯಾದಲ್ಲಿ ನಡೆದ ಜಿ–20 ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಆ ಪ್ರವಾಸಕ್ಕೆ ₹ 32,09,760 ವೆಚ್ಚವಾಗಿದೆ. ಸೆಪ್ಟೆಂಬರ್‌ 26–28ರ ಜಪಾನ್ ಪ್ರವಾಸಕ್ಕೆ ₹ 23,86,536 ವೆಚ್ಚವಾಗಿದೆ.

ಇದೇ ವರ್ಷದಲ್ಲಿ ಪ್ರಧಾನಿಯವರ ಯೂರೋಪ್ ಪ್ರವಾಸಕ್ಕೆ ₹ 2,15,61,304 ಖರ್ಚಾದರೇ, 2019 ಸೆಪ್ಟೆಂಬರ್‌ 21–28 ನಡುವಿನ ಅಮೆರಿಕ ಪ್ರವಾಸಕ್ಕೆ ₹ 2,15,61,304  ಖರ್ಚಾಗಿದೆ ಎಂದು ಮುರಳೀಧರನ್‌ ಮಾಹಿತಿ ನೀಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸವು, ಮಿತ್ರ ರಾಷ್ಟ್ರಗಳ ಜತೆಗಿನ ಸಂಬಂಧ ಗಟ್ಟಿಗೊಳಿಸಿದ್ದಲ್ಲದೇ, ಭಾರತ ದೃಷ್ಟಿಕೋನವನ್ನು ಪ್ರಸ್ತುತ ಪಡಿಸಲು ಹಾಗೂ ಜಾಗತಿಕ ಸಮಸ್ಯೆಗಳ ಬಗ್ಗೆ ಜಾಗತಿಕ ಕಾರ್ಯಸೂಚಿ ರೂಪಿಸಲು ಸಹಾಯಕವಾಗಿದೆ‘ ಎಂದು ಅವರು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು