ಮಂಗಳವಾರ, ಸೆಪ್ಟೆಂಬರ್ 21, 2021
21 °C
ವಿಶ್ವೇಶ್ವರಯ್ಯ ಸ್ಮರಿಸಿದ ಪ್ರಧಾನಿ

Engineers Day | ಎಂಜಿನಿಯರ್‌ಗಳಿಗೆ ಅಭಿನಂದಿಸಲು ಶಬ್ದಗಳೇ ಸಾಲುತ್ತಿಲ್ಲ: ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ನಮ್ಮ ಜಗತ್ತನ್ನು ಇನ್ನಷ್ಟು ಉತ್ತಮ ಮತ್ತು ತಾಂತ್ರಿಕವಾಗಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಎಂಜಿನಿಯರ್‌ಗಳಿಗೆ ಅಭಿನಂದನೆ ಸಲ್ಲಿಸಲು ಶಬ್ಧಗಳೇ ಸಾಕಾಗುತ್ತಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದರು.

ಶ್ರೇಷ್ಠ ಸಿವಿಲ್‌ ಎಂಜಿನಿಯರ್‌ ಮತ್ತು ಮೈಸೂರಿನ ದಿವಾನರಾಗಿದ್ದ  ಸರ್‌ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಪ್ರಯುಕ್ತ ಸೆಪ್ಟೆಂಬರ್‌ 15ರಂದು ಎಂಜಿನಿರ್‌ಗಳ ದಿನವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ಅವರು ಶುಭಾಶಯ ಕೋರುವ ವೇಳೆ ಈ ವಿಷಯ ತಿಳಿಸಿದ್ದಾರೆ.

‘ನಿಮಗೆ ಎಂಜಿನಿಯರ್‌ಗಳ ದಿನದ ಶುಭಾಶಯಗಳು. ನಮ್ಮ ಜಗತ್ತನ್ನು ತಾಂತ್ರಿಕವಾಗಿ ಮುನ್ನಡೆಸುವಲ್ಲಿ ನೀವು ಪ್ರಮುಖ ಪಾತ್ರವಹಿಸಿದ್ದೀರಿ. ಸರ್‌ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯಂದು ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರ ಸಾಧನೆಗಳನ್ನು ಸದಾ ಸ್ಮರಿಸುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ... ಪಾಕ್ ಉಗ್ರರ ಭಾರಿ ಷಡ್ಯಂತ್ರ ಬಯಲಿಗೆಳೆದ ದೆಹಲಿ ಪೊಲೀಸ್, ಆರು ಮಂದಿ ಸೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು