ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ನಿರ್ವಹಣೆಯಲ್ಲಿ ಪೊಲೀಸರ ಪಾತ್ರ ಮಹತ್ವದ್ದು: ಅಜಿತ್ ದೋಭಾಲ್

ಹೈದರಾಬಾದ್‌ನ ಎಸ್‌ವಿಪಿಎನ್‌ಪಿಎ ದಲ್ಲಿ ನಡೆದ ಐಪಿಎಸ್ ಪ್ರೊಬೆಷನರಿ ಅಧಿಕಾರಿಗಳ ನಿರ್ಗಮನ ಪಥ ಸಂಚಲನ
Last Updated 12 ನವೆಂಬರ್ 2021, 7:32 IST
ಅಕ್ಷರ ಗಾತ್ರ

ಹೈದರಾಬಾದ್: ‘ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಯ ಜೊತೆಗೆ ಪಾಕಿಸ್ತಾನ, ಚೀನಾ ಮತ್ತು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಜೊತೆಗಿನ 15,000 ಕಿಮೀ ಗಡಿಭಾಗದ ನಿರ್ವಹಣೆಯಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ’ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋಭಾಲ್‌ ಹೇಳಿದ್ದಾರೆ.

ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಶುಕ್ರವಾರ 73ನೇ ಐಪಿಎಸ್‌ ಪ್ರೊಬೇಷನರಿ ಅಧಿಕಾರಿಗಳ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಭಾರತದ ಸಾರ್ವಭೌಮತ್ವವು ಕರಾವಳಿ ಪ್ರದೇಶಗಳಿಂದ ಗಡಿ ಪ್ರದೇಶದಲ್ಲಿನ ಕೊನೆಯ ಪೊಲೀಸ್ ಠಾಣೆ ಸರಹದ್ದಿನವರೆಗೂ ವ್ಯಾಪಿಸಿದೆ’ ಎಂದರು.

ಭಾರತದ 32 ಲಕ್ಷ ಚ.ಕಿ.ಮೀ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ರಕ್ಷಣೆ ಪೊಲೀಸ್ ಪಡೆಗಳ ಹೊಣೆಗಾರಿಕೆ. ನಿಮಗೆ ನೀಡಿದ ತರಬೇತಿಯ ಉದ್ದೇಶ ಪೊಲೀಸ್ ಕೆಲಸವಷ್ಟೇ ಅಲ್ಲ, ಅದನ್ನೂ ಮೀರಿದ್ದಾಗಿದೆ’ ಎಂದು ಹೇಳಿದರು.

‘ದೇಶದ ಗಡಿ ನಿರ್ವಹಣೆಯ ಜವಾಬ್ದಾರಿಯೂ ನಿಮ್ಮ ಮೇಲಿದೆ. ಸುಮಾರು 15 ಸಾವಿರ ಕಿ.ಮೀ. ದೂರದ ಗಡಿ ಭಾಗದಲ್ಲಿ ವಿಭಿನ್ನವಾದ ಸಮಸ್ಯೆಗಳು ಇವೆ’ ಎಂದು ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.

’ಪಾಕಿಸ್ತಾನ, ಚೀನಾ ಅಥವಾ ಮ್ಯಾನ್ಮಾರ್ ಅಥವಾ ಬಾಂಗ್ಲಾದೇಶದ ಜೊತೆಗೆ ದೇಶದ ಗಡಿ ಇದೆ. ಭದ್ರತೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿವೆ. ಸದ್ಯ, ಪೊಲೀಸರು ಮತ್ತು ಕೇಂದ್ರ ಪೊಲೀಸ್ ಇಲಾಖೆಗಳು ನಿರ್ವಹಿಸುತ್ತಿವೆ’ ಎಂದು ದೋಭಾಲ್‌ ಹೇಳಿದರು.

ದೋಭಾಲ್ ಪ್ರಕಾರ ದೇಶದಲ್ಲಿ 21 ಲಕ್ಷ ಪೊಲೀಸ್ ಸಿಬ್ಬಂದಿ ಇದ್ದು, ಇದೂವರೆಗೆ 35,480 ಮಂದಿ ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ್ದಾರೆ. ಹುತಾತ್ಮರಾದ 40 ಐಪಿಎಸ್‌ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT