ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೂ’ನಲ್ಲಿ ಪ್ರಕಾಶ್‌ ಜಾವಡೇಕರ್

Last Updated 12 ಫೆಬ್ರುವರಿ 2021, 17:10 IST
ಅಕ್ಷರ ಗಾತ್ರ

ನವದೆಹಲಿ: ಟ್ವಿಟ್ಟರ್‌ಗೆ ಪರ್ಯಾಯವಾದ ಭಾರತದ ಮೈಕ್ರೋ ಬ್ಲಾಗಿಂಗ್‌ ವೇದಿಕೆ ‘ಕೂ’ನಲ್ಲಿ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಶುಕ್ರವಾರ ತಮ್ಮ ಖಾತೆ ತೆರೆದಿದ್ದಾರೆ.

ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದು, ‘ಈಗ ನಾನು ‘ಕೂ’ ಕೂಡ ಬಳಸುತ್ತಿದ್ದೇನೆ. ಅದರಲ್ಲಿ @prakashjavadekar ಫಾಲೊ ಮಾಡಿ’ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವರು, ರಾಜಕಾರಣಿಗಳು ಸೇರಿದಂತೆ ಹಲವರು ಜನ ಈಗ ‘ಕೂ’ ಆ್ಯಪ್‌ ಬಳಸುತ್ತಿದ್ದಾರೆ. ಕಳೆದ 10 ತಿಂಗಳ ಹಿಂದೆ ಈ ಆ್ಯಪ್‌ ಆರಂಭವಾಗಿದೆ. ಆದರೆ ರೈತರ ಪ್ರತಿಭಟನೆ ವಿಚಾರವಾಗಿ ಟ್ವಿಟ್ಟರ್‌ ಜೊತೆಗಿನ ಅಸಮಾಧಾನದಿಂದಾಗಿಕಳೆದ ಕೆಲ ವಾರಗಳಿಂದ ಕೇಂದ್ರ ಸಚಿವರು ಹಾಗೂ ಸರ್ಕಾರಿ ಇಲಾಖೆ ವಿಭಾಗಗಳು ‘ಕೂ’ ಆ್ಯಪ್‌ ಬಳಸುತ್ತಿದ್ದು, ಭಾರಿ ಪ್ರಚಾರ ಪಡೆದುಕೊಂಡಿದೆ.

ಈಚೆಗೆ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಕೂಡ ‘ಕೂ’ಗೆ ಸೇರಿದ್ದಾರೆ.

‘ಕೂ’ ಕೂಡ ಟ್ವಿಟರ್‌ನಂತೆಯೇ ಇದೆ. ಟ್ವಿಟರ್‌ನ ಲೋಗೋದಲ್ಲಿ ನೀಲಿ ಹಕ್ಕಿ ಇರುವಂತೆ ಇಲ್ಲಿ ಹಳದಿ ಬಣ್ಣದ ಹಕ್ಕಿ ಇದೆ. ಸದ್ಯ ‘ಕೂ‘ವನ್ನು 30 ಲಕ್ಷ ಜನರು ಬಳಸುತ್ತಿದ್ದಾರೆ ಎಂದು ಅದರ ಸಹಸ್ಥಾಪಕ ಮಯಾಂಕ್‌ ಬಿಡವಟಕ ತಿಳಿಸಿದ್ದಾರೆ.

‘ಕೂ’ ಆ್ಯಪ್
‘ಕೂ’ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT