ಮಂಗಳವಾರ, ಸೆಪ್ಟೆಂಬರ್ 29, 2020
22 °C

ನಾಲ್ಕು ಮಂದಿಗೆ ಶೌರ್ಯ ಚಕ್ರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲೆಫ್ಟಿನೆಂಟ್‌ ಕರ್ನಲ್‌ ಕೃಷ್ಣ ಸಿಂಗ್‌ ರಾವತ್‌, ಮೇಜರ್‌ ಅನಿಲ್ ಅರಸ್‌, ಹವಾಲ್ದಾರ್‌ ಅಲೋಕ್‌ ಕುಮಾರ್‌ ದುಬೆ ಹಾಗೂ ವಿಂಗ್‌ ಕಮಾಂಡರ್‌ ವಿಶಾಖ್‌ ನಾಯರ್‌ ಅವರು ಶೌರ್ಯ ಚಕ್ರ ಗೌರವಕ್ಕೆ ಭಾಜನರಾಗಿದ್ದಾರೆ.

60 ಮಂದಿ ವೀರ ಯೋಧರಿಗೆ ಸೇನಾ ಪದಕ (ಶೌರ್ಯ), ನೌಕಾಪಡೆಯ ನಾಲ್ಕು ಮಂದಿಗೆ ‘ನವೊ ಸೇನಾ ಪದಕ’, ಭಾರತೀಯ ವಾಯುಪಡೆಯ ಐದು ಮಂದಿಗೆ ‘ವಾಯು ಸೇನಾ ಪದಕ’ ನೀಡಲು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಶುಕ್ರವಾರ ಒಪ್ಪಿಗೆ ಸೂಚಿಸಿದ್ದಾರೆ.

‘ಆ‍ಪರೇಷನ್‌ ಮೇಘದೂತ್‌’ ಮತ್ತು ‘ಆಪರೇಷನ್‌ ರಕ್ಷಕ್‌’ ಸೇನಾ ಕಾರ್ಯಾಚರಣೆಗಳಲ್ಲಿ ಮಡಿದ ಎಂಟು ಮಂದಿ ಯೋಧರಿಗೆ ಮರಣೋತ್ತರ ಸೇನಾ ಪದಕ ನೀಡಲು ನಿರ್ಧರಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಇವರಿಗೆ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ.

ಗಾಲ್ವನ್‌ ಕಣಿವೆ ಸಂಘರ್ಷದಲ್ಲಿ ಹುತಾತ್ಮರಾದವರಿಗೆ ಮುಂದಿನ ವರ್ಷ ಪದಕ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು