ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಬಾಕಿ: ಹೈಕೋರ್ಟ್ ಮೆಟ್ಟಿಲೇರಿದ ದೆಹಲಿ ವಿವಿ ಪ್ರಾಧ್ಯಾಪಕರು

Last Updated 15 ಸೆಪ್ಟೆಂಬರ್ 2020, 7:29 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳ ಎಂಟು ಪ್ರಾಧ್ಯಾಪಕರು2020ರ ಮೇ ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ತಮ್ಮ ವೇತನ ಪಾವತಿಸುವಂತೆ ಕಾಲೇಜುಗಳಿಗೆ ಸೂಚನೆ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ವಕೀಲರಾದ ಅಶೋಕ್‌ ಅಗರ್‌ವಾಲ್‌, ಕುಮಾರ್‌ ಉತ್ಕರ್ಷ್‌ ಅವರ ಮೂಲಕ ಸಹಾಯಕ ಪ್ರಧ್ಯಾಪಕ ಉದಯ್‌ಬಿರ್‌ ಸಿಂಗ್‌ ಮತ್ತು ಇತರರು ಮೇಲ್ಮನವಿ ಸಲ್ಲಿಸಿದ್ದಾರೆ.

‘ಅರ್ಜಿದಾರರಿಗೆ 2020ರ ಮೇ ತಿಂಗಳಿನಿಂದ ಇಲ್ಲಿಯವರೆಗೂ ವೇತನ ಪಾವತಿಯಾಗಿಲ್ಲ.ಕಾಲೇಜುಗಳ ಕಡೆಯಿಂದ ಉಂಟಾಗಿರುವ ಈ ನಿಷ್ಕ್ರಿಯತೆಯ ವಿರುದ್ಧ, ಅರ್ಜಿದಾರರಿಗೆ ವೇತನ ನೀಡುವಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಲಾಗಿದೆ. ಕಾಲೇಜುಗಳು ದೆಹಲಿ ವಿಶ್ವವಿದ್ಯಾಲಯ ಕಾಯ್ದೆ 1922ರ ನಿಬಂಧನೆಗಳು, ಸಂವಿಧಾನಸ ಸೆಕ್ಷನ್‌ 14 ಮತ್ತು 21ರ ಅಡಿಯಲ್ಲಿ ಖಾತರಿಪಡಿಸಿರುವ ಅರ್ಜಿದಾರರ ಮೂಲಭೂತ ಹಕ್ಕನ್ನು ಉಲ್ಲಂಘಿಸಿವೆ’ ಎಂದು ತಿಳಿಸಲಾಗಿದೆ.

ವೇತನ ತಡೆ ಹಿಡಿದಿರುವುದು ಅನ್ಯಾಯ, ತಾರತಮ್ಮ ಮತ್ತು ಅಸಾಂವಿಧಾನಿಕ ಎಂದೂ ದೂರಲಾಗಿದ್ದು ಮುಂದಿನ ದಿನಗಳಲ್ಲಿ ಸಕಾಲದಲ್ಲಿ ವೇತನ ಪಾವತಿಸುವಂತೆ ಸೂಚಿಸಬೇಕು ಎಂದು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT