ಶನಿವಾರ, ಫೆಬ್ರವರಿ 4, 2023
28 °C

ಪುದುಚೇರಿ: ವಿನಾಯಕ ದೇವಾಲಯದ ‘ಲಕ್ಷ್ಮಿ‘ ಆನೆ ಹೃದಯಾಘಾತದಿಂದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುದುಚೇರಿ: ಇಲ್ಲಿನ ಪ್ರಸಿದ್ಧ ಮನಕುಲ ವಿನಾಯಕ ದೇಗುಲಕ್ಕೆ ಸೇರಿದ್ದ ಆನೆಯೊಂದು ಹೃದಯಾಘಾತದಿಂದ ಬುಧವಾರ ಮೃತಪಟ್ಟಿದೆ. ಈ ಆನೆಗೆ ಲಕ್ಷ್ಮಿ ಎಂದು ನಾಮಕರಣ ಮಾಡಲಾಗಿತ್ತು.

ಸರ್ಕಾರಿ ಕಾಲೇಜಿನ ಮೈದಾನದಲ್ಲಿ ಆನೆ ವಿಹಾರ ಮಾಡುತ್ತಿದ್ದಾಗ ಹಠಾತ್ ಕುಸಿದು ಬಿದ್ದಿದೆ. ಮಾಹಿತಿ ತಿಳಿದು ಪಶುವೈದ್ಯರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಆನೆ ಮೃತಪಟ್ಟಿತ್ತು ಎಂದು ವಿನಾಯಕ ದೇಗುಲದ ಪ್ರಧಾನ ಆರ್ಚಕರು ಹೇಳಿದ್ದಾರೆ.

ಆನೆಗೆ ಯಾವುದೇ ಕಾಯಿಲೆಗಳು ಇರಲಿಲ್ಲ ಆದರೆ ಆನೆ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

1995ರಲ್ಲಿ ಈ ಆನೆಯನ್ನು ಕೈಗಾರಿಕೋದ್ಯಮಿಯೊಬ್ಬರು ದೇವಸ್ಥಾನಕ್ಕೆ ದಾನ ಮಾಡಿದ್ದರು. ಲಕ್ಷ್ಮಿ ಆನೆಯ ಆಶೀರ್ವಾದ ಪಡೆಯಲು ಕೇರಳ, ಆಂಧ್ರ, ಕರ್ನಾಟಕ, ತಮಿಳುನಾಡು ಸೇರಿದಂತೆ ವಿದೇಶಿ ಭಕ್ತರು ಕೂಡ ಬರುತ್ತಿದ್ದರು.

ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಆಣೆಯ ಅಂತ್ಯಕ್ರಿಯೆ ನಡೆಸಲಾಯಿತು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರನ್ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು