ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮದ್ಯ ಮಾಫಿಯಾ: ಕಳೆದ 24 ಗಂಟೆಗಳಲ್ಲಿ 135 ಜನರ ಬಂಧಿಸಿದ ಪಂಜಾಬ್‌ ಪೊಲೀಸರು

Last Updated 6 ಆಗಸ್ಟ್ 2020, 16:17 IST
ಅಕ್ಷರ ಗಾತ್ರ

ಪಂಜಾಬ್‌: ಅಕ್ರಮ ಮದ್ಯ ಮಾಫಿಯಾವನ್ನು ರಾಜ್ಯವ್ಯಾಪಿ ನಿಗ್ರಹಿಸಲು ಪಣತೊಟ್ಟಂತಿರುವ ಪಂಜಾಬ್‌ ಪೊಲೀಸರು ಕಳೆದ 24 ಗಂಟೆಗಳಲ್ಲಿ 135ಕ್ಕೂ ಹೆಚ್ಚು ಜನರನ್ನು ಬಂಧಿಸಿ, 197 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಕಳೆದ ವಾರ ಪಂಜಾಬ್‌ನಲ್ಲಿ ನಕಲಿ ಮದ್ಯ ಸೇವಿಸಿ 112 ಮಂದಿ ಮೃತಪಟ್ಟಿದ್ದರು. ಆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹಬ್ಬಿ ನಿಂತಿರುವ ಅಕ್ರಮ ಮದ್ಯ ಮಾಫಿಯಾವನ್ನು ನಿಗ್ರಹಿಸುವುದಾಗಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ತಿಳಿಸಿದ್ದರು. ಅದರ ಭಾಗವಾಗಿ ನಡೆದ ಕಾರ್ಯಚರಣೆಯಲ್ಲಿ ಒಂದೇ ದಿನ 135ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಮತ್ತು 197 ಪ್ರಕರಣಗಳು ದಾಖಲಾಗಿವೆ.

ನಕಲಿ ಮದ್ಯ ಪ್ರಕರಣದ ಕುರಿತು ಈಗಾಗಲೇ ನ್ಯಾಯಾಂಗ‌ ತನಿಖೆ ನಡೆಸುವಂತೆ ಅಮರಿಂದರ್‌ ಸಿಂಗ್‌ ಆದೇಶಿಸಿದ್ದಾರೆ. ಈ ಸಂಬಂಧ, ಏಳು ಅಬಕಾರಿ ಮತ್ತು ಆರು ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ‌ಮೃತ ವ್ಯಕ್ತಿಗಳ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ₹ 2 ನೆರವು ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT