ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಢಾಬಾದಲ್ಲಿ ಪುಟಾಣಿಗಳೊಂದಿಗೆ ಚಹಾ ಸವಿದ ರಾಹುಲ್‌

ರಾಜಸ್ಥಾನದಲ್ಲಿ ‘ಭಾರತ್‌ ಜೋಡೊ ಯಾತ್ರಾ‘
Last Updated 5 ಡಿಸೆಂಬರ್ 2022, 13:38 IST
ಅಕ್ಷರ ಗಾತ್ರ

ಝಾಲವಾಡ (ರಾಜಸ್ಥಾನ): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರಾಜಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ತಮ್ಮ 89ನೇ ದಿನದ ಭಾರತ್‌ ಜೋಡೊ ಯಾತ್ರೆ ಆರಂಭಿಸಿದರು. ಇಲ್ಲಿಗೆ ಸಮೀಪದಢಾಬಾವೊಂದರಲ್ಲಿ ಸಣ್ಣ ಮಕ್ಕಳೊಂದಿಗೆ ಚಹಾ ಸೇವಿಸಿ, ಸಂವಾದ ನಡೆಸಿದರು.

ಮಧ್ಯಪ್ರದೇಶದಲ್ಲಿ ಯಾತ್ರೆ ಪೂರ್ಣಗೊಳಿಸಿ ರಾಜಸ್ಥಾನದ ಗಡಿಯಲ್ಲಿರುವಝಾಲ್ರಾಪಾಟನ್‌ ಕಾಲಿತಲಾಯಿ ಗ್ರಾಮದಿಂದ ಬೆಳಿಗ್ಗೆ 6.10ಕ್ಕೆ ಯಾತ್ರೆ ಆರಂಭಿಸಿದ ರಾಹುಲ್‌ ಜತೆಗೆ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಮತ್ತು ಪ್ರಭಾವಿ ನಾಯಕ ಸಚಿನ್‌ ಪೈಲಟ್‌ ಅವರು ಒಗ್ಗಟ್ಟಿನಲ್ಲಿ ಹೆಜ್ಜೆ ಹಾಕಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ. ವೇಣುಗೋಪಾಲ್‌, ರಾಜಸ್ಥಾನದ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಗೋವಿಂದ್‌ ಸಿಂಗ್‌ ದೋತಾಸ್ರಾ, ಹಿರಿಯ ನಾಯಕ ಭನ್ವಾರ್‌ ಜಿತೇಂದ್ರ ಸಿಂಗ್‌, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರತಾಪ್‌ ಸಿಂಗ್‌ ಖಚಾರಿಯಾವಾಸ್‌ ಯಾತ್ರೆಯಲ್ಲಿ ಜತೆಗೂಡಿದರು.

‘ಶೌರ್ಯದ ಮಣ್ಣಿಗೆಭಾರತ್‌ ಜೋಡೋ ಯಾತ್ರಾದ ನಮನ. ಹಲವು ಚರಿತ್ರೆಯ ನೆಲೆಯಾದ ರಾಜಸ್ಥಾನವು ಮತ್ತೊಂದು ಚರಿತ್ರೆ ನಿರ್ಮಿಸುತ್ತದೆ’ ಕಾಂಗ್ರೆಸ್‌ ಪಕ್ಷವು ಟ್ವೀಟ್‌ ಮಾಡಿದೆ.

ಯಾತ್ರೆಯಲ್ಲಿ ಅಸ್ವಸ್ಥರಾದಮಾಜಿ ಸಂಸದ ರಘುವೀರ್‌ ಮೀನಾ ಅವರನ್ನು ಆಂಬುಲೆನ್ಸ್‌ನಲ್ಲಿ ಕರೆದೊಯ್ದು ಝಾಲವಾಡಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.

ರಾಜ್ಯದಲ್ಲಿ 17 ದಿನಗಳು ಸಂಚರಿಸಲಿರುವ ಯಾತ್ರೆಯು ಏಳು ಜಿಲ್ಲೆಗಳನ್ನು ಒಟ್ಟು ಸುಮಾರು 500 ಕಿ.ಮೀ. ಹಾದು ಹೋಗಲಿದೆ. ಇದೇ 21ರಂದು ಹರಿಯಾಣವನ್ನು ಪ್ರವೇಶಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT